ಭೋಪಾಲ್: ಗಂಡ ಹೆಂಡತಿಯ ನಡುವೆ ಸಾಮರಸ್ಯ ಇಲ್ಲವೆಂದರೆ ಚಿಕ್ಕ ಚಿಕ್ಕ ತಪ್ಪುಗಳು ದೊಡ್ಡದಾಗಿ ಕಾಣಿಸುತ್ತವೆ. ಕೆಲವೊಮ್ಮೆ ಆ ಚಿಕ್ಕ ವಿಷಯಗಳಿಂದ ಪ್ರಾರಂಭವಾಗುವ ಜಗಳಗಳು ಡೈವೋರ್ಸ್ ನಲ್ಲಿ ಕೊನೆಗೊಳ್ಳುವುದು ಉಂಟು. ಹೆಚ್ಚಿನ ಡೈವೋರ್ಸ್ ಗಳು ಕುಟುಂಬ ಕಲಹ, ಗಂಡ ಅತ್ತೆ ಮಾವನೊಂದಿಗೆ ಹೊಂದಾಣಿಕೆ ಇಲ್ಲ ಅಥವಾ ಇನ್ನೂ ಕೆಲವೊಮ್ಮ ಸಣ್ಣ ಸಣ್ಣ ವಿಚಾರಗಳಿಗೆ ಜಗಳ ಮಾಡಿಕೊಂಡು ದಂಪತಿ ಪರಸ್ಪರ ಡೈವೋರ್ಸ್ ಪಡೆದಕೊಂಡಿರುತ್ತಾರೆ.
ಆದರೆ ಇಲ್ಲೊಬ್ಬಳು ಮಹಿಳೆ, ತನ್ನ ಗಂಡನಿಗೆ ಆತನ ಗರ್ಲ್ಫ್ರೆಂಡ್ ಜೊತೆ ಮದುವೆ ಮಾಡಿಸಲು ತನ್ನ ಡೈವೋರ್ಸ್ ಕೊಟ್ಟಿರುವ ಅಪರೂಪದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಈ ಡೈವೋರ್ಸ್ ಘಟನೆ ಕೊಂಚ ವಿಚಿತ್ರ ಅನ್ನಿಸಿದರು ಇದು ಸತ್ಯ. ಆ ಮಹಿಳೆಗೆ ವಿಚ್ಛೇದನ ಕೊಡಿಸಿದ ವಕೀಲರು ಈ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದು ಆ ಕೇಸ್ ನ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಭೋಪಾಲ್ ನಿವಾಸಿಗಳಾಗಿರುವ ಈ ದಂಪತಿಗಳು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಅದರೆ ಈ ಮಧ್ಯೆ ಅಕೆಯ ಪತಿ ತನ್ನ ಗರ್ಲ್ಫ್ರೆಂಡ್ ಜೊತೆಗೂ ಮದುವೆಯಾಗಿ ಇಬ್ಬರೊಂದಿಗೂ ಸಂಸಾರ ಮಾಡಬೇಕೆಂದು ತನ್ನ ಪತ್ನಿಯ ಬಳಿ ಹೇಳಿಕೊಂಡಿದ್ದರು. ಆದರೆ ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲದ್ದರಿಂದ ಮಹಿಳೆ ಬಹಳ ತಾನೇ ವಿಚ್ಛೇದನ ನೀಡಲು ಮುಂದಾಗಿದ್ದಲ್ಲದೆ ತನ್ನ ಗಂಡ ಮತ್ತು ಅತನ ಗರ್ಲ್ಫ್ರೆಂಡ್ ಜೊತೆಗೆ ಮದುವೆಯಾಗಲು ಬೆಂಬಲ ನೀಡಿದ್ದಾರೆ ಎಂದು ಮಹಿಳೆ ಪರ ಲಾಯರ್ ತಿಳಿಸಿದ್ದಾರೆ.