ಡಾ. ವಿಷ್ಣುವರ್ಧನ್ ವಿರುದ್ಧ ಅವಹೇಳನಕಾರಿ ಹೇಳಿಕೆ. ವಿಷ್ಣು ಮೆಂಟಾಲಿಟಿ ಬಗ್ಗೆ ಕೊಂಕು ಮಾತನಾಡಿದ ತೆಲುಗಿನ ನಟ.!!

Vishnuvardhan Rangaraju

ಶಾಂತ ಸ್ವಭಾವ ಹಾಗು ತಮ್ಮ ಅದ್ಭುತ ಅಭಿನಯದಿಂದ ಕನ್ನಡದ ಕೊಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ ವಾಗಿರುವ ಡಾ.ವಿಷ್ಣುವರ್ಧನ್ ಅವರ ವಿರುದ್ಧ, ತೆಲುಗಿನ ನಟ ರಂಗರಾಜು ” ವಿಷ್ಣುವರ್ಧನ್ ಅವರಿಗೆ ಗರ್ಲ್ಸ್ ವೀಕ್ನೇಸ್ ಇತ್ತು ಆಗು ಒಂದು ಬಾರಿ ನಾನು ಕೊರಳು ಪಟ್ಟಿ ಇಡಿದು ಸಾಹಿಸುತ್ತೇನೆ ಎಂದು ಹೇಳಿದ್ದೆ” ಎಂಬ ವಿವಾದಾತ್ಮಕ ಹೇಳಿಕೆ ನೀಡುವ ಮೂಲದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ ರಂಗರಾಜು.

Vishnuvardhan

ಒಂದು ವಾಹಿನಿಯ ಸಂದರ್ಶನದ ವೇಳೆ ವಿಷ್ಣುವರ್ಧನ್ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ವಿಜಯ್ ರಂಗರಾಜು ಏನು ಹೇಳಿದ್ದಾನೊ ಅದನ್ನು ಯತ್ತಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ

ವಿಜಯ್ ರಂಗರಾಜು ಹೇಳಿಕೆ : ” ಒಂದು ಕನ್ನಡ ಸಿನೆಮಾ ಮಾಡ್ತಿದ್ವಿ ಸಿನಿಮಾ ಹೆಸರು ಮುತ್ತೈದೆ ಭಾಗ್ಯ ಪ್ರಭಾಕರ್ ಹೀರೋ, ವಿಷ್ಣುವರ್ಧನ್ ಗೆಸ್ಟ್ ರೋಲ್. ಕಂಠಿರವ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತಿತ್ತು. ನಾಳೆ ನಮ್ಮ ಶೂಟಿಂಗ್ ಇತ್ತು ಅದಕ್ಕೆ ನಾವು ಸೆಟ್ ನೋಡೋಣ ಅಂತ ಹೊಗಿದ್ವಿ. ನಾನು ಹೋಗಿ ನಿಂತುಕೊಂಡ ತಕ್ಷಣ ಜಯಮಾಲಿನಿ ಬಂದು ನನ್ನ ಮೇಲೆ ಕೈ ಹಾಕಿ ಅಪ್ಪಿ ಕೊಂಡಳು ಇದನ್ನು ನೋಡಿದ ವಿಷ್ಣುವರ್ಧನ್ ನಮ್ಮಿಬ್ಬರನ್ನು ಹೊರಗೆ ಹೋಗುವಂತೆ ಹೇಳಿದ್ರು, ನಾನು ಹೋಗಲು ರೆಡಿಯಾಗಿದ್ದೆ ಅದ್ರೆ ಜಯಮಾಲಿನಿ ನಾನ್ಯಾಕೆ ಹೋಗಬೇಕು ಅಂದ್ಲು ಆಗ ವಿಷ್ಣುವರ್ಧನ್ ನನಗೆ ಡಿಸ್ಟರ್ಬ್ ಆಗುತ್ತೆ ಅಂದ್ರು. ವಿಷ್ಣುವರ್ಧನ್ ಅವರಿಗೆ ಲೇಡೀಸ್ ವೀಕ್ನೇಸ್ ಇತ್ತು, ಇವರಿಬ್ಬರು ಇಲ್ಲಿ ರೊಮ್ಯಾನ್ಸ್ ಮಾಡ್ತಿದ್ದಾರೆ ಅಂತ ವಿಷ್ಣುವರ್ಧನ್ ಫೀಲ್ ಆಗಿದ್ರು. ಮೊದಲಿನಿಂದಲೂ ವಿಷ್ಣುವರ್ಧನ್ ಗೆ ಒಳ್ಳೆಯ ಮಂಟಾಲಿಟಿ ಇರಲಿಲ್ಲ.  ಕನ್ನಡದ ಖೈದಿ ಸಿನಿಮಾ ಮಾಡ್ತಿದ್ವಿ, ವಾಹಿನಿ ಸ್ಟುಡಿಯೋದಲ್ಲಿ ಫೈಟ್. ಮಧ್ಯಾಹ್ನದವರೆಗೆ ಫೈಟ್ ನೆಡಿತು, ಮಧ್ಯಾಹ್ನದ ಮೇಲೆ ಅಂಬಾಸಿಡರ್ ಕಾರಿನ ಗ್ಲಾಸ್ ತೆಗೆದು ವಿಷ್ಣುವರ್ಧನ್ ನನ್ನ ಭುಜದ ಮೇಲೆ ಹೊಡಿಯಬೇಕು. ನಾನು ಅಲೋಚನೆ ಮಾಡಿ ನಾನು ಈ ಶಾಟ್ ಮಾಡಲ್ಲ ಎಂದು ಫೈಟ್ ಮಾಸ್ಟರಿಗೆ ಹೇಳಿದೆ. ಹೀರೋ ಚಿರಂಜೀವಿ ಅದ್ರೆ ಮಾಡ್ತಿನಿ ಹೀರೋ ವಿಷ್ಣುವರ್ಧನ್ ಅದರೆ ಮಾಡಲ್ಲ ಎಂದೆ. ವಿಷ್ಣುವರ್ಧನ್ ಮೆಂಟಾಲಿಟಿ ಮೊದಲೆ ಗೊತ್ತಿದ್ದರಿಂದ ನಾನು ಆ ಸೀನ್ ಮಾಡಲಿಲ್ಲ. ಅದರೆ ವಿಷ್ಣುವರ್ಧನ್ ಕಾರಿನ ಗ್ಲಾಸ್ ಅನ್ನು ಭುಜಕ್ಕೆ ಹೊಡೆಯುವ ಬದಲು ತಲೆಗೆ ಹೊಡೆದ್ರು, ತಲೆಗೆ ಹೊಡಿಸಿಕೊಂಡವನು ಕೆಳಗೆ ಬಿದ್ದು ಮೀನಿನಂತೆ ಬಿದ್ದು ವಿಲ ವಿಲ ಒದ್ದಾಡಿದ. ತಕ್ಷಣ ನಾನು ಹೋಗಿ ವಿಷ್ಣುವರ್ಧನ್ ಕೊರಳು ಪಟ್ಟಿ ಹಿಡಿದುಕೊಂಡೆ, ಡೈರೆಕ್ಟರ್ ಕೆ.ಎಸ್.ಅರ್ ದಾಸ್ ಸೇರಿ ಎಲ್ಲರೂ ಇದ್ದರೂ. ನಾನು  ವಿಷ್ಣುವರ್ಧನ್ ಗೆ ಬೆಂಗಳೂರಿಗೆ ಹೋಗಲ್ಲ ಮಗನೆ ಸಾಹಿಸಿ ಬಿಡ್ತೀನಿ ಎಂದು ವಾರ್ನ್ ಮಾಡಿದೆ. ಕೆ.ಎಸ್.ಅರ್.ದಾಸ್ ಬಂದು ಬಿಡಪ್ಪ ಅವರು ದೊಡ್ಡ ಹೀರೋ ಅವರನ್ನೆ  ಹಿಡ್ಕೊಂಡಿದಿಯಾ ಅಂದ್ರು. ಇಲ್ಲ ಇವನ್ನ ಬಿಡಲ್ಲ ಇಲ್ಲೆ ಇವನ್ನ ಹೂತಾಕ್ತಿನಿ ಬಿಡಲ್ಲ ಇದೇ ಏಟು ನನಗೆ ಬಿದ್ದಿದ್ರೆ ಏನ್ ಗತಿ” ಎಂದು ಸಂದರ್ಶನದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಾನೆ ವಿಜಯ್ ರಂಗರಾಜು.

Vijay Rangaraju

ಸದಾ ಸುದ್ದಿಯಲ್ಲಿ ಇರಲು ಬಯಸುವ ಇಂತಹ ಕಿಡಿಗೇಡಿಗಳು ಇನ್ನೊಬ್ಬರ ತೆಜೋವದೆ ಮಾಡಿ ತಮ್ಮ ಬೇಳೆ ಬೆಯಿಸಿಕೊಳ್ಳುತ್ತಾರೆ. ವಿಷ್ಣುವರ್ಧನ್ ಬಗ್ಗೆ ಇಡೀ ಕನ್ನಡ ಚಿತ್ರರಂಗಕ್ಕೆ ಗೊತ್ತು ಅವರು ಏನು ಎಂದು ಅವರ ಇಡೀ ಸಿನಿ ಜೀವನದಲ್ಲಿ ಯಾರ ಜೋತೆಯು ಅಸಭ್ಯವಾಗಿ ವರ್ತಿಸಿದ ಇತಿಹಾಸ ವಿಲ್ಲ ತಮ್ಮ ಸಜ್ಜನಿಕೆಯಿಂದ ಕನ್ನಡ ಚಿತ್ರರಂಗವಲ್ಲದೆ ಪಕ್ಕದ ರಾಜ್ಯಗಳಲ್ಲೂ ಅನೇಕ ಸ್ನೇಹಿತರು ಮತ್ತು ಅಭಿಮಾನಿಗಳನ್ನು ಹೊಂದಿದ್ದಾರೆ. ಇಂತಹವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ವಿಜಯ್ ರಂಗರಾಜುವಿನ ಸಣ್ಣತನ  ತೋರಿಸುತ್ತದೆ.

ಸದ್ಯ ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ವಿಷ್ಣು ಸೇನೆ ಫಿಲ್ಮ್ ಚೇಂಬರ್ ಗೆ ಬರವಣಿಗೆಯಲ್ಲಿ ದೂರು ನೀಡಿದೆ.

Leave a Reply

Your email address will not be published. Required fields are marked *