ಕನ್ನಡದ ಹಾಲಿವುಡ್ ಮಾದರಿಯ ನಟ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ ಫ್ಯಾಂಟಮ್ ಸಿನಿಮಾದ ಟೈಟಲ್ ಬದಲಾಗಲಿದೆ ಎನ್ನುವ ಸುದ್ದಿಯೊಂದು ಕಳೆದ ಕೆಲವು ದಿನಗಳಿಂದಲೂ ಕೂಡಾ ಹರಿದಾಡುತ್ತಿದೆ. ಅದಕ್ಕೆ ಸ್ವತಃ ಚಿತ್ರ ತಂಡವು ಕೂಡ ಚಿತ್ರದ ಶೀರ್ಷಿಕೆಯಲ್ಲಿ ಬದಲಾವಣೆ ಆಗುವುದು ಖಚಿತ ಎಂದು ತಿಳಿಸಿದೆ.
ಫ್ಯಾಂಟಮ್ ಚಿತ್ರದ ಹೊಸ ಹೆಸರಿನ ಅನಾವರಣಕ್ಕೆ ಬಹು ದೊಡ್ಡ ಮಟ್ಟದ ಸಿದ್ಧತೆಗಳನ್ನು ಕೂಡಾ ಚಿತ್ರ ತಂಡ ಮಾಡಿಕೊಂಡಿದ್ದು. ಚಿತ್ರದ ಹೊಸ ಶೀರ್ಷಿಕೆಯನ್ನು ಅನಾವರಣ ಮಾಡಲು ದುಬೈನ ಬುರ್ಜ್ ಖಲೀಫಾ ದಲ್ಲಿ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಬುರ್ಜ್ ಖಲೀಫಾ ವಿಶ್ವದ ಅತಿ ಎತ್ತರದ ಕಟ್ಟಡವಾಗಿದ್ದು ಈ ಕಟ್ಟಡದಲ್ಲಿ ಟೈಟಲ್ ಬಿಡುಗಡೆ ಆಗುತ್ತಿರುವ ಕನ್ನಡಡ ಮೊಟ್ಟ ಮೊದಲ ಸಿನಿಮಾ ಕೂಡಾ ಇದಾಗಲಿದೆ. ಶೀರ್ಷಿಕೆ ಅನಾವರಣದ ಜೊತೆಗೆ ಮೂರು ನಿಮಿಷಾದ ಒಂದು ಸ್ನೀಕ್ ವೀಡಿಯೋ ಕೂಡಾ ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ.
ಚಿತ್ರ ತಂಡವೆ ಖಚಿತ ಪಡಿಸಿರುವಂತೆ ಜನವರಿ 31 ರಂದು “ವಿಕ್ರಾಂತ್ ರೋಣ” ಹೆಸರಿನಲ್ಲಿ “ಫ್ಯಾಂಟಮ್” ನ ಹೊಸ ಟೈಟಲ್ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಅನಾವರಣಗೊಳ್ಳಲಿದೆ.
ವಿಕ್ರಾಂತ್ ರೋಣ ಸಿನಿಮಾ ಹಾಲಿವುಡ್ ಮಾದರಿಯ ಸಿನಿಮವಾಗಿದ್ದು. ಈ ಸಿನಿಮಾಕ್ಕಾಗಿ ಹೈದ್ರಾಬಾದ್ ನಲ್ಲಿನ ಅನ್ನಪೂರ್ಣ ಸ್ಟೂಡಿಯೋ ದಲ್ಲಿ ಒಂದು ಭರ್ಜರಿ ಸೆಟ್ ಹಾಕಿ ಸಿನಿಮಾ ಚಿತ್ರೀಕರಣವನ್ನು ನಡೆಸಲಾಗಿದೆ.
ಹೂಸ ಟೈಟಲ್ ಕಾರ್ಡ್ ನೊಂದಿಗೆ ಬಿಡುಗಡೆ ಅಗಲಿರುವ ಸ್ನೀಕ್ ವೀಡಿಯೋದ ಮೂಲಕ ವಿಕ್ರಮ ರೋಣ ಸಿನಿಮಾ ಹೇಗೆಲ್ಲಾ ಇರಲಿದೆ ಎನ್ನುವುದನ್ನು ಅಭಿಮಾನಿಗಳ ಮತ್ತು ಸಿನಿ ಪ್ರೇಮಿಗಳ ಮುಂದೆ ಇರಿಸುವ ಪ್ರಯತ್ನವನ್ನು ಕೂಡಾ ಚಿತ್ರ ತಂಡ ಮಾಡಬಹುದು ಎನ್ನುವ ಊಹೆ ಇದೆ. ಆಗೆ ಸಿನಿಮಾದ ನಾಯಕಿ ಯಾರೆಂಬ ವಿಚಾರ ಕೂಡಾ ಆಗಲೇ ಬಹಿರಂಗವಾಗಬಹುದು ಎಂಬ ನಿರೀಕ್ಷೆ ಇದೆ.
ಆಗೆ ಜನವರಿ 31 ಕ್ಕೆ ಬುರ್ಜ್ ಖಲೀಫಾ ದಲ್ಲಿ ನಟ ಕಿಚ್ಚ ಸುದೀಪ್ ಅವರು ಸಿನಿಮಾ ರಂಗಕ್ಕೆ ಅಡಿಯಿಟ್ಟು 25 ವರ್ಷಗಳ ಸೆಲೆಬ್ರೇಷನ್ ನ ವಿಶೇಷ ಕಾರ್ಯಕ್ರಮವನ್ನು ಕೂಡಾ ಆಯೋಜಿಸಲಾಗುತ್ತಿದೆ.
ಬುರ್ಜ್ ಖಲೀಫಾದಲ್ಲಿ ಈ ಹಿಂದೆ ಹಾಲಿವುಡ್ ಸಿನಿಮಾಗಳ ಟ್ರೈಲರ್ ಮತ್ತು ಟೀಸರ್ ಗಳು ಬಿಡುಗಡೆ ಆಗಿದ್ದವು. ಈಗ ಅವುಗಳ ಸಾಲಿಗೆ ಕನ್ನಡ ಸಿನಿಮಾ ಕೂಡಾ ಸೇರ್ಪಡೆಯಾಗುತ್ತಿದ್ದು, ಈಗ ಇಡೀ ವಿಶ್ವವೆ ಕನ್ನಡ ಚಿತ್ರರಂಗದತ್ತ ಒಮ್ಮೆ ತಿರುಗಿ ನೋಡುವಂತೆ ವಿಕ್ರಾಂತ್ ರೋಣ ಮಾಡಿದ್ದಾನೆ.