ಅಚ್ಚ ಕನ್ನಡತಿ ಕೋಲಾರದ ಡಬ್ ಸ್ಮ್ಯಾಷ್ ಹುಡುಗಿ ಸಿಂಚನ ಗೌಡ…!

ಸಿಂಚನ ಗೌಡ

ಈಗೀಗ ಶಾರ್ಟ್ ವಿಡಿಯೋ, ಡಬ್ ಸ್ಮ್ಯಾಷ್ ಗಳು ಒಂದು ಟ್ರೆಂಡ್ ಆಗಿದ್ದು ಅನೇಕ ಪ್ರತಿಭೆಗಳಿಗೆ ತಮ್ಮಲ್ಲಿರುವ ಪ್ರತಿಭೆ ತೋರಿಸಲು ಒಂದು ವೇದಿಕೆಯಾಗಿದೆ ಎಷ್ಟೋ ಜನ ಇವುಗಳಿಂದಲೆ ರಾತ್ರೊ ರಾತ್ರಿ ಸ್ಟಾರ್ ಆದ ಉದಾಹರಣೆಗಳಿವೆ. ಕೆಲವರು ತಮ್ಮ ಮೈ ಪ್ರದರ್ಶಿಸಿ ಟ್ರೋಲರ್ ಗಳಿಗೆ ಅಹಾರವಾದರೆ ಇನ್ನು ಕೆಲವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿ ಸ್ಟಾರ್ ಆದವರು ಇದ್ದಾರೆ ಅದರಲ್ಲಿ ಸಿಂಚನ ಗೌಡ ಎಂಬ ಮುಗ್ಧ ಮನಸ್ಸಿನ ಚೆಂದುಳ್ಳಿ ಚೆಲುವೆಯು ಒಬ್ಬರು.

ಸಿಂಚನ ಗೌಡ

ಸಿಂಚನ ಗೌಡ ಮೂಲತಃ ಹಾಸನ ಜಿಲ್ಲೆಯ ಹೊಳೆನರಿಸಿಪುರದವರಾಗಿದ್ದು ಈಗ ತಮ್ಮ ಕುಟುಂಬದ ಜೊತೆ ಕೋಲಾರ ಜಿಲ್ಲೆಯಲ್ಲಿ ಬಂದು ನೆಲೆಸಿದ್ದಾರೆ. ತಮ್ಮ ತಂದೆ ತಾಯಿಯ ಮುದ್ದಿನ ಮಗಳಾಗಿರುವ ಸಿಂಚನ ಗೌಡ ದ್ವಿತೀಯ ಪಿಯುಸಿ ಓದುತ್ತಿದ್ದು, ಓದಿನಲ್ಲೂ ಕೂಡ ಮುಂದಿದ್ದಾರೆ. ಅಲ್ಲದೆ ಮ್ಯೂಸಿಕ್ ಮತ್ತು ಡ್ಯಾನ್ಸ್ ಕೂಡ ಅಚ್ಚುಮೆಚ್ಚು.

ಪಕ್ಕಾ ಯಶ್ ಮತ್ತು ರಾಧಿಕಾ ಪಂಡಿತ್ ಅಭಿಮಾನಿಯಾಗಿರುವ ಸಿಂಚನ ಗೌಡ Like Dubsmash App ನಲ್ಲಿ ತಮ್ಮ ಡಬ್ ಸ್ಮ್ಯಾಷ್ ವಿಡಿಯೋಗಳ ಮೂಲಕ 22000 ಕ್ಕೂ ಅಧಿಕ ಫಾಲೊವರ್ಸ್ ಗಳನ್ನು ಹೊಂದಿದ್ದಾರೆ ಅಲ್ಲದೆ 21 ಅಗಸ್ಟ್ 2019 ರಂದು Like Dubsmash App  ನಲ್ಲಿ ಅತಿ ಹೆಚ್ಚು ವಿಡಿಯೋ ಆಲ್ಬಮ್ ಹೊಂದಿರುವುದಕ್ಕೆ Guinness World Record Certificate ಪಡೆದಿರುವುದು ಸಿಂಚನ ಗೌಡ ಅವರ ಪ್ರತಿಭೆಗೆ ಸಿಕ್ಕ ಯಶಸ್ಸಿನ ಗರಿಯಾಗಿದೆ.

ಸಿಂಚನ ಗೌಡ

2018 ರಿಂದ ಇಲ್ಲಿಯವರೆಗೆ ಸುಮಾರು ಎರಡು ಸಾವಿರಕ್ಕೂ ಅಧಿಕ ಶಾರ್ಟ್ ಡಬ್ ಸ್ಮ್ಯಾಷ್ ವಿಡಿಯೋಗಳನ್ನು ಮಾಡಿರುವ ಸಿಂಚನ ಗೌಡ ಅದ್ಭುತ ಪ್ರತಿಭೆ ಎನ್ನಲು ಯಾವುದೇ ಅನುಮಾನವಿಲ್ಲ. ಸದ್ಯ ಪಿಯುಸಿ ಓದುತ್ತಿರುವ ಇವರು ಡಾಕ್ಟರ್ ಆಗುವ ಆಸೆ ಹೊಂದಿದ್ದು ಅದರ ಜೊತೆಗೆ ಸಿನಿರಂಗದಲ್ಲೂ ತಮ್ಮ ಚಾಪು ಮೂಡಿಸಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಭಾರತದಲ್ಲಿ Like App ಬ್ಯಾನ್ ಆಗಿದ್ದರಿಂದ ಸದ್ಯ ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಆಕ್ಟಿವ್ ಆಗಿರುವ ಸಿಂಚನ ಗೌಡ ಅವರು ತಮ್ಮ ಡಬ್ ಸ್ಮ್ಯಾಷ್ ವಿಡಿಯೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುವ ಮೂಲಕ ತಮ್ಮ ಫಾಲೊವರ್ಸ್ ಗಳನ್ನು ಕಡಿಮೆ ಸಮಯದಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಅಲ್ಲದೆ ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಅನೇಕ Fans page ಗಳು ಇದ್ದು ಸಿಂಚನ ಗೌಡ ಅವರ ವಿಡಿಯೋಗಳು ಸೋಷಿಯಲ್ ಮಿಡಿಯಾಗಳಲ್ಲಿ ಹೆಚ್ಚೆಚ್ಚು ಶೇರ್ ಮತ್ತು ಲೈಕ್  ಪಡೆದುಕೊಳ್ಳುತ್ತಿರುವುದು ಅವರ ಪ್ರತಿಭೆ ಏನು ಎಂಬುದನ್ನು ತೋರಿಸುತ್ತದೆ. ಇವರ ಪ್ರತಿಭೆಗೆ ತಕ್ಕ ಯಶಸ್ಸು ಸಿಗಲಿ ಆಗೆ ಮುಂದೊಂದು ದಿನ ಇವರನ್ನು ದೊಡ್ಡ ಪರದೆಯಲ್ಲಿ ನೋಡುವ ಅವಕಾಶ ನಮಗೆಲ್ಲ ಸಿಗಲಿ ಎಂದು ಹಾರೈಸೋಣ.

Leave a Reply

Your email address will not be published. Required fields are marked *