ಹುಡಗಿಯರ ಕಾಟ ತಡೆಯಲಾಗದೆ 5 ದಿನ ರಜೆ ಕೊರಿ ಬರೆದ ವಿದ್ಯಾರ್ಥಿಯ ರಜಾರ್ಜಿ ವೈರಲ್

ಶಿವರಾಜ್ ಕೊಳ್ಳೆಗಾಲ ರಜಾರ್ಜಿ

ಚಾಮರಾಜನಗರ: ಫೆಬ್ರವರಿ ಬಂತೆಂದರೆ ಪ್ರೇಮಿಗಳಿಗೆ ಒಂದು ರೀತಿ ಖುಷಿ, ಫೆಬ್ರವರಿ 14 ಪ್ರೇಮಿಗಳ ದಿನ ಅಂದು ಎಷ್ಟೋ ಜನ ತಮ್ಮ ಪ್ರೇಮಿಯ ಮುಂದೆ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಹಾತೊರೆಯುವುದು ಸಾಮನ್ಯ. ಅದರೆ ಇಲ್ಲೊಬ್ಬ ಕಾಲೇಜು ವಿದ್ಯಾರ್ಥಿ ಹುಡುಗಿಯರ ಕಾಟದಿಂದ ತಪ್ಪಿಸಿಕೊಳ್ಳಲು ಐದು ದಿನಗಳ ರಜೆ ಕೋರಿ ಪ್ರಾಂಶುಪಾಲರಿಗೆ ಬರೆದಿರುವ ರಜಾರ್ಜಿ ಸೋಷಿಯಲ್ ಮಿಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ದ್ವೀತಿಯ ಬಿ.ಕಾಂ  ಓದುತ್ತಿರುವ ವಿದ್ಯಾರ್ಥಿ ಎಸ್ ಶಿವರಾಜು ವಿಕ್ಟರ್ ರಜೆ ಕೋರಿ ಪತ್ರ ಬರೆದಿದ್ದಾನೆ.

ಪತ್ರದ ಸಾರಾಂಶ..! : ಪ್ರೇಮಿಗಳ ದಿನಾಚರಣೆಯ ಹಿನ್ನೆಲೆಯಲ್ಲಿ ಹುಡುಗಿಯರ ಕಾಟ ತಡೆಯಲು ಆಗ್ತಿಲ್ಲ. ಹೀಗಾಗಿ ನನಗೆ ಐದು ದಿನ ರಜೆ ನೀಡಿ ಎಂದು ರಜಾರ್ಜಿ ಬರೆದಿದ್ದಾನೆ. ಈ ಅರ್ಜಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿದ್ದು, ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿದ್ಯಾರ್ಥಿಯ ರಜಾರ್ಜಿ ವೈರಲ್ ಆಗುತ್ತಿದ್ದಂತೆಯೇ ವಿದ್ಯಾರ್ಥಿ ಶಿವರಾಜ್ ಮತ್ತು ಆತನ ರಜಾರ್ಜಿ ಎಲ್ಲಾ ಕಡೆ ಹರಿದಾಡುತ್ತಿದೆ.

Leave a Reply

Your email address will not be published. Required fields are marked *