ಚಿತ್ರ : ಮುಂಗಾರು ಮಳೆ ೨ ಸಂಗೀತ : ಅರ್ಜುನ್ ಜನ್ಯ
- Every morning I remember you
- Every noon every night I’ll be there for you
- My heart says that I love you
- And my soul will burn always for you
- ಗಮನಿಸು ಒಮ್ಮೆ ನೀನು ಬಯಸಿಹೆ ನಿನ್ನೆ ನಾನು
- ನಂಬದೆ ಏಕೆ ದೂರುವೆ ನನ್ನನು
- ಹೃದಯದ ಮೂಲೆ ಮೂಲೆ dahiside ನಿನ್ನ ಜ್ವಾಲೆ
- ಇರಬಹುದೇ ಹೇಳು karagade ಬರಬಹುದೇ ದಾರಿ mareyade
- ಬಿಸಿಯೆ ಇರದ ಉಸಿರು ನಾನು ನೀನು ಇರದೇ
- ಗಮನಿಸು ಒಮ್ಮೆ ನೀನು ಬಯಸಿಹೆ ನಿನ್ನೆ ನಾನು
- ನಂಬದೆ ಏಕೆ ದೂರುವೆ ನನ್ನನು
- Every morning I remember you
- Every noon every night I’ll be there for you
- My heart says that I love you
- And my soul will burn always for you
- ನನ್ನ ಜಗವೆ ನಿನ್ನ ಹಿಡಿತಕೆ ಸಿಲುಕಿದೆ
- ನಾನಾ ಬಗೆಯ ಭಾವನೆಯ ಹೊಡೆತಕೆ ಚಡಪಡಿಸಿದೆ
- ತಡೆದಿರೋ ಮಾತೆಲ್ಲವೂ ತಲುಪಲೆ ಬೇಕಲ್ಲವೆ
- ನಗಬಹುದೆ ಮೌನ ಮುರಿಯದೆ ಸಿಗಬಹುದೆ ದೂರ ಸರಿಯದೆ
- ಕಳೆದು ಹೋದ ಮಗುವು ನಾನು ನೀನು ಇರದೆ
- ಚೂರು ಮರೆಗೆ ನೀನು ಸರಿದರು ಸಹಿಸೆನು
- ನೀನೆ ತೆರೆದು ನೋಡು ಹೃದಯದ ಬೇಗುದಿಯನು
- ಬದುಕಲು ಈ ನೂತನ ನೆಪಗಳೆ ಸಾಕಲ್ಲವೆ
- ಕೊಡಬಹುದೆ ನೋವ ಒಲಿಯದೆ ಬಿಡಬಹುದೆ ಜೀವ ಬೆರೆಯದೆ
- ಕಿಟಕಿಯಿರದ ಮನೆಯು ನಾನು ನೀನು ಇರದೆ
- Every morning I remember you
- Every noon every night I’ll be there for you
- My heart says that I love you
- And my soul will burn always for you
ಚಿತ್ರ : ಮುಂಗಾರು ಮಳೆ ೨ ( ಸರಿಯಾಗಿ ನೆನಪಿದೆ ನನಗೆ )
- ಸರಿಯಾಗಿ ನೆನಪಿದೆ ನನಗೆ ಇದಕೆಲ್ಲ ಕಾರಣ ಕಿರುನಗೆ
- ಮನದ ಪ್ರತಿ ಗಲ್ಲಿಯೊಳಗು ನಿನದೆ ಮೆರವಣಿಗೆ
- ಕನಸಿನ ಕುಲುಮೆಗೆ ಉಸಿರನು ಊದುತ
- ಕಿಡಿ ಹಾರುವುದು ಇನ್ನು ಖಚಿತ
- ಕಣ್ಣಲೇ ಇದೆ ಎಲ್ಲ ಕಾಗದ ನೀನೆ ನನ್ನಯ ಅಂಚೆ ಪೆಟ್ಟಿಗೆ
- ಏನೇ ಕಂಡರೂ ನೀನೆ ಜ್ಞಾಪಕ ನೀನೆ ಔಷದಿ ನನ್ನ ಹುಚ್ಚಿಗೆ
- ತೆರೆದು ನೀನು ಮುದ್ದಾದ ಅಧ್ಯಾಯ
- ಸಿಗದೆ ಇದ್ರೆ ತುಂಬಾನೇ ಅನ್ಯಾಯ
- ನನ್ನಯ ನಡೆ ನುಡಿ ನಿನ್ನನು ಅರಸುತ
- ಬದಲಾಗುವುದು ಇನ್ನು ಖಚಿತ
- ಸರಿಯಾಗಿ……
- ನಿನ್ನ ನೃತ್ಯಕೆ ಸಿದ್ಧವಾಗಿದೆ ಅಂತರಂಗದ ರಂಗಸಜ್ಜಿಕೆ
- ನಿನ್ನ ನೋಡದ ನನ್ನ ಜೀವನ ಸುದ್ದಿಯಿಲ್ಲದ ಸುದ್ಧಿಪತ್ರಿಕೆ
- ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು
- ಸರಸಕ್ಕೀಗ ನಿಂದೇನೆ ಕಾನೂನು
- ಕೊರೆಯುವ ನೆನಪಲಿ ಇರುಳನು ಕಳೆಯುತ
- ಬೆಳಗಾಗುವುದು ಇನ್ನು ಖಚಿತ