CLASH : ಕೆಜಿಎಫ್ ಚಾಪ್ಟರ್ 2 ಬಿಡುಗಡೆ ದಿನವೇ ಬರುತ್ತಿದೆ ಹೀರೋಪಂತ್ 2 ..!

Kgf2 heropanth2

ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಾಗಿ ಚಿತ್ರಕ್ಕೆ ಇಡೀ ದೇಶವೇ ಕಾತುರದಿಂದ ಕಾದು ಕುಳಿತಿದೆ. ಈಗಾಗಲೇ ಕೆಜಿಎಫ್ ಚಾಪ್ಟರ್ 2 ಟೀಸರ್ ಯೂಟ್ಯೂಬ್ ನಲ್ಲಿ ಮಿಲಿಯನ್ ಗಟ್ಟಲೆ ಲೈಕ್ಸ್ ಮತ್ತು ವ್ಯೂವ್ಸ್ ಪಡೆದು ಭಾರತೀಯ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಪುಡಿಗಟ್ಟಿ ಮುನ್ನುಗ್ಗುತ್ತಿದೆ.

ಇದರ ನಡುವೆ ಚಿತ್ರತಂಡ ಕೆಜಿಎಫ್ ಚಾಪ್ಟರ್ 2 ನ ಬಿಡುಗಡೆಯ ದಿನಾಂಕವನ್ನ ಘೋಷಿಸಿದ್ದು. ಇದೇ ಜುಲೈ 16 ರಂದು ಚಿತ್ರ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ. ಕನ್ನಡ ತೆಲುಗು ತಮಿಳು ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬರುತ್ತಿರುವ ಕೆಜಿಎಫ್ ಚಾಪ್ಟರ್ 2 ಚಿತ್ರ ಏಕಕಾಲಕ್ಕೆ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಕೆಜಿಎಫ್ ಚಾಪ್ಟರ್ 2 ಚಿತ್ರದ ಬಿಡುಗಡೆಯ ದಿನಾಂಕ ಹೊರ ಬಿದ್ದ ನಂತರ ಜುಲೈ ತಿಂಗಳಲ್ಲಿ ಯಾವುದೇ ಚಿತ್ರ ಕೂಡ ಬಿಡುಗಡೆ ಮಾಡಲು ಮುಂದೆ ಬಂದಿರಲಿಲ್ಲ. ಅದರೆ ಇದೀಗ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಹೀರೋಪಂತಿ 2 ಚಿತ್ರ, ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಯಾಗುವ ದಿನವೇ ಬಿಡುಗಡೆಯಾಗಲು ಮುಂದೆ ಬಂದಿದೆ. ಈ ಮೂಲಕ ಬಾಲಿವುಡ್ ನಲ್ಲಿ ಕೆಜಿಎಫ್ ಚಾಪ್ಟರ್ 2 ಮತ್ತು ಹೀರೋಪಂತಿ 2 ಚಿತ್ರಗಳ ನಡುವೆ ಭರ್ಜರಿ ಪೈಪೋಟಿ ಏರ್ಪಡಲಿದೆ.

Leave a Reply

Your email address will not be published. Required fields are marked *