ಭಾರತ ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಸೋತರೆ. ಭಾರತೀಯ ಆಸ್ಟ್ರೇಲಿಯಾ ಯುವತಿಯ ಮನಗೆದ್ದ….!

ಭಾರತ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ಪ್ರವಾಸದಲ್ಲಿ ಇರುವ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ಬಾರಿ ಅಂತರದಲ್ಲಿ ಸೋಲು ಕಂಡಿತ್ತು. ಮೊದಲ ಪಂದ್ಯದ ಸೇಡು ಮತ್ತು ಸರಣಿಯನ್ನು ಜೀವಂತವಾಗಿ ಇಡಲು ಟೀಮ್ ಇಂಡಿಯಾ ಎರಡನೆಯ ಪಂದ್ಯದಲ್ಲಿ ಗೆಲ್ಲಲೆ ಬೇಕಾದ ಒತ್ತಡತಲ್ಲಿತ್ತು. ಅದರೆ ಎರಡನೆಯ ಪಂದ್ಯದಲ್ಲೂ  ವಿರಾಟ್ ಹುಡುಗರು ಅಸೀಸ್ ಮುಂದೆ ಮತ್ತೆ ಸೋತು ಸರಣಿಯನ್ನು ಕೈ ಚೆಲ್ಲಿದ್ದಾರೆ.

ಟೀಮ್ ಇಂಡಿಯಾ ಪಂದ್ಯ ಸೋತು ಸರಣಿ ಕೈ ಚೆಲ್ಲಿದರೆ ಭಾರತೀಯ ಪ್ರೇಮಿಯೊಬ್ಬ ಎರಡನೆಯ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಯುವತಿಗೆ ಪ್ರೇಮ ನೀವೆದನೆ ಮಾಡಿ ಅಕೆಯ ಮನಸ್ಸು ಗೆದ್ದ ಘಟನೆಗೆ ಸಿಡ್ನಿ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಮತ್ತು ಅಸೀಸ್ ಅಟಗಾರರು ಸಾಕ್ಷಿಯಾಗಿದ್ದಾರೆ.

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡುತಿದ್ದ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಭಾರತೀಯ ಯುವಕ ಅಸೀಸ್ ಯುವತಿಯ ಬಳಿ ಹೋಗಿ ಉಂಗುರ ನೀಡಿ ತನ್ನ ಪ್ರೇಮ ನಿವೇದನೆ ಮಾಡಿದ್ದಾನೆ. ಆ ಅಸೀಸ್ ಯುವತಿಯು ಆತನ ಪ್ರೀತಿಯನ್ನು ಒಪ್ಪಿ ಉಂಗುರ ಸ್ವೀಕರಿಸಿ ಇಬ್ಬರೂ ಚುಂಬಿಸಿದ್ದಾರೆ. ಅಲ್ಲದೆ ಆ ಯುವತಿಯು ಅಸೀಸ್ ತಂಡದ ಹಳದಿ ಟೀ ಶರ್ಟ್ ಧರಿಸಿದ್ದರೆ ಯುವಕ ಟೀಮ್ ಇಂಡಿಯಾದ ನೀಲಿ ಟೀ ಶರ್ಟ್ ಧರಿಸಿದ್ದರೆ ವಿಶೇಷವಾಗಿತ್ತು. ಈ ಘಟನೆಗೆ ಸಹ ಪ್ರೇಕ್ಷಕರು ಸಾಕ್ಷಿಯಾಗಿದ್ದರು ಮತ್ತು ಟಿವಿಯಲ್ಲಿ ನೇರ ಪ್ರಸಾರವನ್ನೂ ಕಂಡಿತು.

ಈ ಘಟನೆ ನಡೆಯುವಾಗ ವೀಕ್ಷಕ ವಿವರಣೆ ನೀಡುತಿದ್ದ ಶೇನ್ ವಾರ್ನ್ ಮತ್ತು ಆಡಂ ಗಿಲ್ ಕ್ರಿಸ್ಟ್ ಸಂತಸ ವ್ಯಕ್ತಪಡಿಸಿದರೆ. ಅಕೆಯು ಪ್ರೀತಿಯನ್ನು ಒಪ್ಪಿಕೊಂಡ ಬೆನ್ನಲೆ ಮೈದಾನದ ದೊಡ್ಡ ಪರದೆಯಲ್ಲಿ “ಶೀ ಸೆಡ್ ಹೆಸ್” ಎಂದು ಮೂಡಿಬಂತು. ಇದನ್ನು ಗಮನಿಸಿದ ಫಿಲ್ಡಿಂಗ್ ಮಾಡುತಿದ್ದ ಅಸೀಸ್ ನ ಗ್ಲೇನ್ ಮ್ಯಾಕ್ಸವೇಲ್ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದೆ.

Leave a Reply

Your email address will not be published. Required fields are marked *