ಭಾರತದಲ್ಲಿ ಕೊರೊನ ಲಸಿಕೆ ಪಡೆಯುವವರ ಸಂಖ್ಯೆ ಇಳಿಮುಖವಾಗುತ್ತಿರುವುದರಿಂದ ಜನರಲ್ಲಿ ಕೊರೊನ ಲಸಿಕೆಯ ಬಗ್ಗೆ ಭರವಸೆ ಮತ್ತು ಅತ್ಮ ವಿಶ್ವಾಸ ಮೂಡಿಸಲು ಪ್ರಧಾನ ಮಂತ್ರಿ ಹಾಗು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಲಸಿಕೆ ಪಡೆಯಲು ತಯಾರಿ ನಡೆಸಿದ್ದಾರೆ.
ಜ.16 ರಿಂದ ದೇಶಾದ್ಯಂತ ಲಸಿಕ ಅಭಿಯಾನ ಪ್ರಾರಂಭವಾಗಿದೆ ಅದರೆ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಕಾರಣ ಉದ್ದೇಶಿತ ಗುರಿ ಸಾಧಿಸಲು ಸಾಧ್ಯವಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ಪ್ರಧಾನ ಮಂತ್ರಿ ಸೇರಿದಂತೆ ಸರ್ಕಾರದ ಜನ ಪ್ರತಿನಿಧಿಗಳು ಲಸಿಕೆ ಹಾಕಿಸಿಕೊಂಡರೆ ಜನರಲ್ಲಿ ಲಸಿಕೆಯ ಬಗ್ಗೆ ಅತ್ಮ ವಿಶ್ವಾಸ ಮೂಡಲಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ನ.24 ರಂದು ನಡೆದಿದ್ದ ಪ್ರಧಾನ ಮಂತ್ರಿ ಹಾಗು ಎಲ್ಲಾ ರಾಜ್ಯಗಳ ಸಿಎಂಗಳ ನಡುವೆ ನಡೆದ ಸಂವಾದದ ವೇಳೆ ಲಸಿಕೆ ಸ್ವಿಕಾರದ ಚರ್ಚೆ ನಡೆದಿದ್ದು. ನೀವ್ಯಾರು ಲಸಿಕೆ ಪಡೆಯಲು ಲಾಬಿ ಮಾಡಬಾರದು ನಿಮಗೆಲ್ಲರಿಗೂ 2 ನೇ ಸುತ್ತಿನಲ್ಲಿ ಅವಕಾಶ ಸಿಗಲಿದೆ ಎಂದು ಹೇಳಿದ್ದಾರೆ. ಆದ್ದರಿಂದ ಎರಡನೆಯ ಹಂತದಲ್ಲಿ ಪ್ರಧಾನ ಮಂತ್ರಿ ಹಾಗು 50 ವರ್ಷ ದಾಟಿರುವ ಸಿಎಂ ಗಳು ಸಂಸದರು ಮತ್ತು ಶಾಸಕರು ಲಸಿಕೆ ಪಡೆಯುವ ಸಾಧ್ಯತೆ ಇದೆ.
ಈಗ ಸದ್ಯ ಮೊದಲ ಹಂತದ ಲಸಿಕೆ ಅಭಿಯಾನದಲ್ಲಿ ಆರೋಗ್ಯ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರ, ಪೋಲಿಸರು, ಸಶಸ್ತ್ರ ಪಡೆಗಳು, ನೈರ್ಮಲ್ಯ ಕಾರ್ಮಿಕರು ಲಸಿಕೆ ಸ್ವೀಕರಿಸಿದ್ದಾರೆ.