ಬಾಲ್ಯ ವಿವಾಹ ವಾದ ಯುವತಿಯ ಬಾಳಲ್ಲಿ ಅಟವಾಡಿದ ಕಿರಾತಕ..!

ಚಾಮರಾಜನಗರ: ಸರ್ಕಾರ ಬಾಲ್ಯ ವಿವಾಹ ಗಳನ್ನು ತಡೆಯಲು ಎಷ್ಟೇ ಕಟ್ಟು ನಿಟ್ಟಿನ ಕಾನೂನು ಮತ್ತು ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು ಅಲ್ಲೊಂದು ಇಲ್ಲೊಂದು ಬಾಲ್ಯ ವಿವಾಹಗಳು ನಡೆಯುತ್ತಲೆ ಇರುತ್ತವೆ. ಆಗೆ ಇಲ್ಲೊಬ್ಬಳು ಯುವತಿ ತನ್ನ 14 ನೇ ವಯಸ್ಸಿನಲ್ಲೇ ಮದುವೆಯಾಗಿ ಮದುವೆಯಾದ 5 ವರ್ಷದಲ್ಲೇ ಗಂಡನಿಂದ ದೂರವಾಗಿ ತವರು ಮನೆ ಸೇರಿ ತನ್ನ ಹೆಣ್ಣು ಮಗುವಿನೊಂದಿಗೆ ಜೀವನ ನಡೆಸುತ್ತಿದ್ದಳು. ಹೀಗಿರುವಾಗಲೇ ಯುವಕನೊಬ್ಬ ಜೀವನ ಕೊಡುವುದಾಗಿ ನಂಬಿಸಿ ಮೋಸ ಮಾಡಿ ಈಗ ಯುವತಿ ಕಣ್ಣಿರಿನಲ್ಲಿ ಕೈ ತೊಳೆಯುವಂತೆ ಮಾಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಅಮಚವಾಡಿ ಗ್ರಾಮದ ನಿವಾಸಿಯಾಗಿದ್ದ ಪುಷ್ಪಾ ತನ್ನ 14ನೇ ವಯಸ್ಸಿನಲ್ಲಿ ತನ್ನ ತಾಯಿಯನ್ನು ಕಳೆದುಕೊಂಡು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಳು. ಅಷ್ಟರಲ್ಲಾಗಲೇ ಪುಷ್ಪಾಳ ತಂದೆ ತಾಯಿ ಇಲ್ಲದವಳನ್ನು ಯಾರೂ ಮದುವೆಯಾಗುವುದಿಲ್ಲವೆಂದು 14ನೇ ವಯಸ್ಸಿಗೇ ನಂಜನಗೂಡಿನ ಬದನಗುಪ್ಪೆ ಗ್ರಾಮದ ಕೃಷ್ಣ ನಾಯಕ ಎಂಬವನಿಗೆ ಕೊಟ್ಟು ಮದುವೆ ಮಾಡಿರುತ್ತಾರೆ.

ಶಾಲೆ, ಕಾಲೇಜು ಹೀಗೆ ಬಾಲ್ಯದ ದಿನಗಳನ್ನ ಕಳೆಯಬೇಕಿದ್ದ ಪುಷ್ಪಾಳಿಗೆ ಸಂಸಾರ ನಿಭಾಯಿಸುವುದು ಕಷ್ಟವಾಗಿರುತ್ತದೆ. ಅಗಲೇ ಒಂದು  ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಪುಷ್ಪಾ  ಗಂಡನ ಜೊತೆ ಸಂಸಾರ ಮಾಡಲು ಸಾಧ್ಯವಾಗದೇ ಮದುವೆಯಾದ ಐದೇ ವರ್ಷಕ್ಕೆ ಗಂಡನಿಂದ ದೂರವಾಗಿ ತವರು ಮನೆ ಸೇರಿಕೊಂಡಿರುತ್ತಾಳೆ.

ತನ್ನ ಹೆಣ್ಣು ಮಗುವನ್ನು ಸಾಕಲು ಮತ್ತು ತನ್ನ ಸಂಸಾರ ಸಾಗಿಸಲು ಚಾಮರಾಜನಗರದ ಒಂದು ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುಸುತ್ತಿರುತ್ತಾಳೆ. ಈ ವೇಳೆ ಮಹೇಶ್ ಪರಿಚಯವಾಗುತ್ತದೆ. ಈತ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು, ಪುಷ್ಪಾಳ ಎಲ್ಲ ವಿಚಾರವನ್ನು ಚೆನ್ನಾಗಿ ತಿಳಿದುಕೊಂಡು ಬಾಳು ಕೊಡುತ್ತೇನೆಂದು ನಂಬಿಸಿ ಮೋಸ ಮಾಡಿದ್ದಾನೆ.

ತನ್ನ ಅಜ್ಜಿಯೊಂದಿಗೆ ತವರು ಮನೆಯಲ್ಲಿ ಜೀವನ ನಡೆಸುತ್ತಿದ್ದ ಪುಷ್ಪಾಳನ್ನ ಚಾಮರಾಜನಗರ ಪಟ್ಟಣಕ್ಕೆ ಕರೆಸಿಕೊಂಡ ಮಹೇಶ್ ಮನೆ ಮಾಡಿಕೊಂಡು ಪುಷ್ಪಾಳೊಂದಿಗೆ ಜೀವನ ನಡೆಸುತ್ತಿದ್ದ. ಲೈಂಗಿಕವಾಗಿ ಬಳಸಿಕೊಂಡಿದ್ದ ಮಹೇಶ್ ಪುಷ್ಪಾಳು ನಾಲ್ಕು ತಿಂಗಳ ಗರ್ಭವತಿಯಾದಾಗ ಹೆದರಿ ಮಗುವನ್ನು ತೆಗೆಸುವಂತೆ ಕೇಳಿಕೊಳ್ಳುತ್ತಾನೆ. ಇದಕ್ಕೆ ಒಪ್ಪದ ಪುಷ್ಪಾಳನ್ನು  ತಮಿಳುನಾಡಿಗೆ ಪ್ರವಾಸದ ನೆಪದಲ್ಲಿ ಕರೆದುಕೊಂಡು ಹೋಗಿ ಮತ್ತು ಬರುವ ಔಷಧಿ ನೀಡಿ ಖಾಸಗಿ ಆಸ್ಪತ್ರೆಯಲ್ಲಿ ಅಪರೇಷನ್ ಮಾಡಿಸಿಕೊಂಡು ಬಂದಿರುತ್ತಾನೆ.

ಮಹೇಶ್ ನನ್ನು  ಪುಷ್ಪಾ ತನ್ನ ಮದುವೆ ಆಗುವುಂತೆ ಪೀಡಿಸಿದಾಗಲೆಲ್ಲ ಇಂದು ನಾಳೆ ಎಂದು ಕಥೆ ಹೇಳುತ್ತಿದ್ದ. ಅಗೆ ದಿನನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ, ಅಲ್ಲದೆ ಮಹೇಶ್ ಗೆ ಬೇರೊಂದು ಯುವತಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿರುವುದು ಪುಷ್ಪಾಗೆ ಗೊತ್ತಾಗಿದೆ.

ತಕ್ಷಣ ನ್ಯಾಯ ಕೊಡಿಸುವಂತೆ ಚಾಮರಾಜನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪುಷ್ಪಾ ದೂರು ದಾಖಲಿಸುತ್ತಾಳೆ. ಪೊಲೀಸರು ಮಹೇಶ್ ನನ್ನ ಕರೆಸಿ ವಿಚಾರಣೆ ನಡೆಸಿ ಜೈಲಿಗಟ್ಟಿದ್ದಾರೆ. ಇತ್ತ ಗಂಡನಿಂದ ದೂರವಾದ ಪುಷ್ಪಾ ಸಾಕಷ್ಟು ಕಷ್ಟ ಅನುಭವಿಸಿದ್ದು, ಪ್ರಿಯಕರ ಮಹೇಶ್ ಜೊತೆ ಬಾಳಲು ಅವಕಾಶ ಮಾಡಿಕೊಡಬೇಕೆಂದು ಕಣ್ಣೀರುಡುತ್ತಿದ್ದಾಳೆ. ಸದ್ಯ ಚಾಮರಾಜನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕುಟುಂಬದ ಸ್ವಾಧಾರ ಗೃಹದಲ್ಲಿ ಆಶ್ರಯ ಪಡೆದಿದ್ದಾರೆ.

Leave a Reply

Your email address will not be published. Required fields are marked *