ಎಂಬತ್ತರ ದಶಕದ ಮಾದರಿಯಲ್ಲಿ ನಿರ್ಮಾಣವಾಗಿದ್ದ ಬೆಲ್ ಬಾಟಮ್ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರ ಮನಗೆದ್ದದ್ದು ಗೊತ್ತೇ ಇದೆ. ಈ ಚಿತ್ರವನ್ನು ಗೋಲ್ಡನ್ ಹಾರ್ಸ್ ಸಂಸ್ಥೆ ನಿರ್ಮಾಣ ಮಾಡಿತ್ತು, ಈಗ ಇದೆ ಸಂಸ್ಥೆ ಬೆಲ್ ಬಾಟಮ್ 2 ಚಿತ್ರ ಮಾಡಲು ಮುಂದಾಗಿದ್ದಾರೆ.
ಬೆಲ್ ಬಾಟಮ್ 2 ಚಿತ್ರಕ್ಕೆ ದಯಾನಂದ್ ಕಥೆ ಬರೆದಿದ್ದು ,ಜಯತೀರ್ಥ ಅವರು ನಿರ್ದೇಶನ ಮಾಡಲಿದ್ದಾರೆ. ಆಗೆ ಅಜನೀಶ್ ಲೋಕನಾಥ್ ಅವರ ಸಂಗೀತ ಬೆಲ್ ಬಾಟಮ್ ಚಿತ್ರಕ್ಕಿದೆ. ಚಿತ್ರದ ತಾರಾಗಣದಲ್ಲಿ ರಿಷಬ್ ಶೆಟ್ಟಿ, ಹರಿಪ್ರಿಯಾ ಜತೆಗೆ ತಾನ್ಯಾ ಹೋಪ್ ಪ್ರಮಖ ಪಾತ್ರದಲ್ಲಿದ್ದು ಬಹುತೇಕ ಬೆಲ್ ಬಾಟಂ ಮೊದಲ ಭಾಗದಲ್ಲಿ ಇದ್ದ ತಂಡವೇ ಬೆಲ್ ಬಾಟಮ್ 2 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬೆಲ್ ಬಾಟಮ್ 2 ಚಿತ್ರಕ್ಕೆ “ದಿ ಕ್ಯೂರಿಯಸ್ ಕೇಸ್ ಆಫ್ ಚೆಂಡೂವ” ಎಂಬ ಟ್ಯಾಗ್ ಲೈನ್ ಇದೆ. ಚಿತ್ರದ ಮುಹೂರ್ತವನ್ನು ಇಂದು ಅದ್ದೂರಿಯಾಗಿ ಬೆಂಗಳೂರಿನ ಬನಶಂಕರಿಯ ಧರ್ಮಗಿರಿ ಶ್ರೀ ಮಂಜುನಾಥ ದೇಗುಲದಲ್ಲಿ ನಡೆಸಲಾಗಿತ್ತು. ಬೆಲ್ ಬಾಟಮ್ 2 ಹಾಗೂ ರಿಶಭ್ ಶೆಟ್ಟಿ ಸೇರಿದಂತೆ ಚಿತ್ರತಂಡಕ್ಕೆ ಶುಭ ಹಾರೈಸಲು ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಆಗಮಿಸಿ ಬೆಲ್ ಬಾಟಮ್ 2 ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರ ತಂಡಕ್ಕೆ ಶುಭ ಕೊರಿದರು.