Amazon ನಲ್ಲಿ ಸಗಣಿಯ ಬೆರಣಿ ತರಿಸಿಕೊಂಡು ಕೇಕ್ ಎಂದು ತಿಂದು ಕಾಮೆಂಟ್ ಮಾಡಿದ..!

ಈಗೀಗ ಹೆಚ್ಚಿನ ಜನರಿಗೆ ಆನ್ಲೈನ್ ನಲ್ಲಿ ಅಂದರೆ ಅಮೆಜಾನ್, ಫ್ಲಿಪ್ಕಾರ್ಟ್, ಇನ್ನೂ ಮುಂತಾದ ಆಪ್ ಗಳಲ್ಲಿ ತಮಗೆ ಬೇಕಾದ ವಸ್ತುಗಳನ್ನು ಕೊಂಡು ಕೊಳ್ಳುವುದು ಒಂದು ಅಭ್ಯಾಸವಾಗಿದೆ. ಮನೆಯ ಬಳಿಯೆ ಶಾಪ್ ಅಥವಾ ಮಾಲ್ ಗಳಿದ್ದರು ಹೆಚ್ಚಿನ ಜನ ಆನ್ಲೈನ್ ನಲ್ಲಿ ಕೊಂಡು ಕೊಳ್ಳಲು ಇಷ್ಟ ಪಡುತ್ತಾರೆ. ಆಗೆ ಇಲ್ಲೊಬ್ಬ ಅಮೆಜಾನ್ ನಲ್ಲಿ ಕೇಕ್ ಎಂದು ಸಗಣಿಯ ಬೆರಣಿ ತರಿಸಿಕೊಂಡು ತಿಂದಿರುವ ಘಟನೆ ಬಗ್ಗೆಯ ಒಂದು ವಿವರ ಇಲ್ಲಿದೆ ನೋಡಿ.

ಅಮೆಜಾನ್ ನಲ್ಲಿ ಸಗಣಿಯ ಬೆರಣಿ ಕೂಡ ಮಾರಾಟಕ್ಕಿದ್ದು  ಚಿಕ್ಕ 24 ಪೀಸ್ ಗಳ ಒಂದು ಪ್ಯಾಕೆಟ್ ನ ಬೆಲೆ 299 ರೂಪಾಯಿ ಇದೆ. ಇದರ ಮರಾಟಗಾರರು ಇದಕ್ಕೆ ಇಂಗ್ಲಿಷ್ ನಲ್ಲಿ Pure & Original Holy Cow Dung Cake ಎಂದು ಹೆಸರಿಸಿ, ಕೇಕ್ ಸೈಜಿನ ಕೆಲವು ಸಗಣಿಯ ಬೆರಣಿ ಚಿತ್ರಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಇದನ್ನು ಪೂಜೆ, ಹವನ , ಮತ್ತು ಧಾರ್ಮಿಕ ಆಚರಣೆಯಲ್ಲಿ ಬಳಸಲು ಉಪಯುಕ್ತವಾದದ್ದು ಎಂದು ದೊಡ್ಡ ಅಕ್ಷರಗಳಲ್ಲೆ ನಮೂದಿಸಿ ಮಾರಾಟಕಿಟ್ಟಿದ್ದಾರೆ.

ಇಲ್ಲೊಬ್ಬ ಮಹಾನ್ ಬುದ್ಧಿವಂತ ಇದನ್ನು ಹೇಗೆ ಓದಿದನೊ ತಿಳಿಯದು ಅದರೆ ಇದನ್ನು ತಿನ್ನುವ ಕೇಕ್ ಎಂದು ಅರ್ಡರ್ ಮಾಡಿದ್ದಾನೆ. ಮನೆಗೆ ಅರ್ಡರ್ ಬಂದ ನಂತರ ಅದನ್ನು ತಿಂದಿದ್ದಾನೆ.

ಆ ಬೆರಣಿಯನ್ನು ತಿಂದಿದ್ದಲ್ಲದೆ ಬೆರಣಿಯ ರುಚಿಯ ಬಗ್ಗೆ ಆ ಪ್ರಾಡಕ್ಟನ ಕಾಮೆಂಟ್ ಬಾಕ್ಸ್ ನಲ್ಲಿ  “ It tasted very bad when I ate it. It was grass-like and muddy in taste. I got loose motions after that. Please be a little more hygienic while manufacturing. Also, pay attention to the taste and crunchiness of this product. ” ಎಂದು ಕಾಮೆಂಟ್ ಮಾಡಿದ್ದಾನೆ.

ಈ ಸುದ್ದಿ ಈಗ ಸೋಷಿಯಲ್ ಮಿಡಿಯಾಗಳಲ್ಲಿ ಅಭಿಮಾನಿಗಳು ಸಖತ್ ವೈರಲ್ ಆಗಿದೆ.

Leave a Reply

Your email address will not be published. Required fields are marked *