ಸ್ಯಾಂಡಲ್ ವುಡ್ ನ ಬಹುಬೇಡಿಕೆ ನಟಿ ಆತ್ಮಹತ್ಯೆಗೆ ಪ್ರಯತ್ನ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ..!!

ನಾಗಮಂಡಲ ಚಲನಚಿತ್ರ ಚಿತ್ರದ ಮೂಲಕ ಎಲ್ಲರ ಮನೆಮಾತಾಗಿದ್ದ, ವಿಜಯಲಕ್ಷ್ಮಿ ಎಲ್ಲರಿಗೂ ಚಿರಪರಿಚಿತೆ, ಇದೆ ವಿಜಯಲಕ್ಷ್ಮಿ ಅವರು ಇಂದು ಮಾತ್ರೆ ನುಂಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಮಾತ್ರೆ ನುಂಗಿದ ತಕ್ಷಣ ಅವರನ್ನು ಚೆನ್ನೈ ನ ಒಂದು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

ಆತ್ಮಹತ್ಯೆಗೆ ಮುನ್ನ ಒಂದು ವಿಡಿಯೋ ಮಾಡಿರುವ ವಿಜಯಲಕ್ಷ್ಮಿ ಅವರು “ಇದು ನನ್ನ ಜೀವನದ ಕೊನೆಯ ವಿಡಿಯೋ ಆಗಿದೆ, ಇದಾದ ಮೇಲೆ ನಾನು ಬದುಕಿರಲ್ಲ ಎಲ್ಲರಿಗೂ ನನ್ನ ಕೊನೆಯ ನಮಸ್ಕಾರಗಳು, ನನ್ನ ಸಾವಿಗೆ ಚೆನ್ನೈನ ಪ್ರಮುಖ ಇಬ್ಬರು ವ್ಯಕ್ತಿಗಳು ನನಗೆ ಮಾನಸಿಕವಾಗಿ ತುಂಬಾ ಹಿಂಸೆ ಕೊಡುತ್ತಿದ್ದರು, ನಾನು ವೇಶ್ಯವಾಟೀಕೆ ಮಾಡುತ್ತಿದ್ದೆನೆಂದು ಸುಳ್ಳು ಸುದ್ದಿ ಹಬ್ಬಿಸಿ, ನನ್ನ ಬಗ್ಗೆ ಅಪಪ್ರಚಾರ ಮಾಡುತಿದ್ದಾರೆ, ಇಂಥಹ ಅವಮಾನ ಸಹಿಸಿಕೊಂಡು ನನಗೆ ಜೀವನ ನಡೆಸಲು ತುಂಬಾ ಕಷ್ಟವಾಗುತ್ತಿದೆ. ನನ್ನ ಈ ಸಾವು ಎಲ್ಲರ ಕಣ್ಣು ತೆರೆಸಲು ಇದು ಒಂದು ಪಾಠವಾಗಬೇಕು, ಎಂದು ವಿಡಿಯೋ ಮಾಡಿ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.

ವಿಡಿಯೋದಲ್ಲಿ ನನ್ನ ಆತ್ಮಹತ್ಯೆಗೆ ಆ ಇಬ್ಬರು ವ್ಯಕ್ತಿಗಳೆ ಕಾರಣ ಎಂದು ಹೇಳಿ ಅವರನ್ನು ಸುಮ್ಮನೆ ಬಿಡಬೇಡಿ, ಅವರಿಗೆ ತಕ್ಕ ಪಾಠ ಕಲಿಸಿ ಎಂದು ತಮ್ಮ ಅಭಿಮಾನಿಗಳಿಗೆ ಕೇಳಿಕೊಂಡಿದ್ದಾರೆ.ಸದ್ಯ ಅವರು ಚೆನ್ನೈ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿ ಹೊರ ಬರಬೇಕಿದೆ.

Leave a Reply

Your email address will not be published. Required fields are marked *