ಸ್ಯಾಂಡಲ್ ವುಡ್ ನಲ್ಲಿ 23 ವಸಂತ ಪೂರೈಸಿದ ಡಿ ಬಾಸ್, ಜೋರಾಗಿದೆ ಅಭಿಮಾನಿಗಳ ಜೋಷ್..!

ಡಿ ಬಾಸ್ ಕನ್ನಡ ಚಿತ್ರರಂಗದಲ್ಲಿ ಇದೆ ಆಗಸ್ಟ್ 11 ಕ್ಕೆ ಇಪ್ಪತ್ಮೂರು ವರ್ಷಗಳನ್ನ ಯಶಸ್ವಿಯಾಗಿ ಪೂರೈಸಲಿದ್ದಾರೆ, ನಿಮಗೆಲ್ಲ ಗೊತ್ತೇ ಇದೆ ಡಿ ಬಾಸ್ ಕನ್ನಡ ಚಿತ್ರರಂಗ ಪ್ರವೇಶಸಿದ್ದು ಲೈಟ್ ಬಾಯ್ ಆಗಿ, ಅಲ್ಲಿಂದ ಎಸ್. ನಾರಾಯಣ್ ಅವರ ಅಂಬಿಕಾ ಧಾರಾವಾಹಿಯ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿ ಕೊಂಡರು.

1997 ರ ಅಗಸ್ಟ್ 11 ರಲ್ಲಿ ದರ್ಶನ್ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು, ಅವರ ಮೊದಲು ಅಭಿನಯಿಸಿದ ಚಿತ್ರ “ಮಹಾಭಾರತ” ಈ ಚಿತ್ರ ದಲ್ಲಿ ವಿನೋದ್ ರಾಜ್ ಮತ್ತು ಚರಣ್ ರಾಜ್ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು, ದರ್ಶನ್ ಅವರ ಈ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ವಿಶೇಷ ವೆಂದರೆ ಈ ಚಿತ್ರ ಕೂಡ ಎಸ್. ನಾರಾಯಣ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿತ್ತು.

ದರ್ಶನ್ ಅವರು ಮೊದಲ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿದ ಚಿತ್ರ “ಮೆಜೆಸ್ಟಿಕ್ಕ” ಈ ಚಿತ್ರದಲ್ಲಿ ಎರಡು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದರು ದರ್ಶನ್, ಈ ಚಿತ್ರದ ದಾಸ ಎಂಬ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ದಾಸ ಎಂಬ ಮಾಸ್ ಪಾತ್ರದಿಂದ ಜರ್ನಿ ಆರಂಭಿಸಿದ ಡಿ ಬಾಸ್ ಇಂದು “ಯಜಮನ” ನಾಗಿ ಅಭಿಮಾನಿಗಳ ಪ್ರೀತಿಯ “ಒಡೆಯ” ನಾಗಿದ್ದಲ್ಲದೆ, “ರಾಬರ್ಟ್” ಎಂಬ ಖದರ್ ಲುಕ್ ನಿಂದಾಗಿ ಅಭಿಮಾನಿಗಳಿಗೆ ರಸದೌತಣ ನೀಡಲು “ರಾಜವೀರ ಮದಕರಿ ನಾಯಕ” ಆಗ ಹೊರಟಿದ್ದಾರೆ.

ಈ ಸಮಯದಲ್ಲಿ ಡಿ ಬಾಸ್ ಅವರ 23 ವರ್ಷಗಳ ಸಂಭ್ರಮಾಚರಣೆ ಮಾಡಲು ಅಭಿಮಾನಿಗಳು ಆಗಲೆ ಸಿದ್ದತೆ ಆರಂಭಿಸಿದ್ದು, ದರ್ಶನ್ ಅವರ ಸಿನಿ ಜರ್ನಿಯ ಒಂದು ಸ್ಪೇಶಲ್ ಸಾಂಗ್ ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ಡಿ ಬಾಸ್ ಅವರು ‘ನೀನಾಸಂ’ನಲ್ಲಿ ಅಭಿನಯಿಸಿದ್ದರಿಂದ ಹಿಡಿದು ,ಚಾಲೆಂಜಿಂಗ್​ ಸ್ಟಾರ್ ಆಗಿ ಬೆಳೆದು ಬಂದ ದಾರಿಯ ಸಿನಿ ಬದುಕಿನ ಪಯಣವನ್ನ ತೋರಿಸಲಾಗಿದೆ. ಈ ಸಂಭ್ರಮದ ಆಚರಣೆ ಡಿ ಬಾಸ್ ಅಭಿಮಾನಿಗಳಿಗೆ ಸಂತಸ ತಂದಿದೆ, ನೀವು ಡಿ ಬಾಸ್ ಅಭಿಮಾನಿಯಾಗಿದ್ದರೆ ಇದನ್ನು ಎಲ್ಲಾ ಅಭಿಮಾನಿಗಳಿಗೂ ಶೇರ್ ಮಾಡಿ ತಲುಪಿಸಿ.

Leave a Reply

Your email address will not be published. Required fields are marked *