ಭಜರಂಗಿ 2 ಚಿತ್ರ ಬಿಡುಗಡೆ ಮುನ್ನವೇ ಮತ್ತೆ ಹೊಸ ಚಿತ್ರ ಕೈಗೆತ್ತಿ ಕೊಂಡ ಶಿವಣ್ಣ ಮತ್ತು ಹರ್ಷ.

ಶಿವಣ್ಣ ಮತ್ತು ಹರ್ಷ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಮೂರನೇ ಚಿತ್ರ ಭಜರಂಗಿ 2, ಈ ಚಿತ್ರದ ಶೂಟಿಂಗ್ ಇನ್ನು ಬಾಕಿ ಇದ್ದು , ಶೂಟಿಂಗ್ ಕೆಲಸಗಳು ನಡೆಯುತ್ತಿವೆ. ಇದರ ನಡುವೆ ಹರ್ಷ ಅವರು ಶಿವಣ್ಣ ಗೆ ಯೂನಿಕ್ ಆಗಿರುವ ಒಂದು ಕಥೆ ರೆಡಿ ಮಾಡಿ ಚಿತ್ರದ ಕಥೆ ಹೇಳಿದ್ದಾರೆ. ಕಥೆ ಕೇಳಿದ ಶಿವಣ್ಣ ಈ ಸಿನಿಮಾ ನಿರ್ಮಾಣ ಮಾಡೋಕೆ ಪ್ಯಾಷನೆಟ್ ಪ್ರೊಡ್ಯೂಸರ್ ಬೇಕು ಅಂತ ಹೇಳಿದ್ರಂತೆ. ಕೊನೆಗೆ ಈ ಸಿನಿಮಾ ನಿರ್ಮಾಣ ಮಾಡೋಕೆ ನಿರ್ಮಾಪಕರನ್ನ ಶಿವಣ್ಣನೇ ಹುಡುಕಿ ಕೊಟ್ಟಿದ್ದಾರಂತೆ.

ಆ ನಿರ್ಮಾಪಕರು ಬೇರೆ ಯಾರು ಅಲ್ಲ, ಚಿತ್ರರಂಗಕ್ಕೆ ನಿರ್ಮಾಪಕರಾಗಿ ಬಂದ್ರೆ ಶಿವರಾಜ್​ಕುಮಾರ್ ಸಿನಿಮಾದಿಂದಲೇ ಬರಬೇಕು ಅಂದುಕೊಂಡಿದ್ದ ಅಶೋಕ್‌ ಕುಮಾರ್ ಮತ್ತು ರಮೇಶ್‌ ಕುಮಾರ್ ಅವರು ಈ ಚಿತ್ರದ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಇವರಲ್ಲದೆ ‘ಕಿಲ್ಲಿಂಗ್ ವೀರಪ್ಪನ್’ ನಿರ್ಮಾಣ ಮಾಡಿದ್ದ ಸುಧೀಂದ್ರ ಕೂಡ ಕೈಜೋಡಿಸಿದ್ದಾರೆ.

ಶಿವಣ್ಣನ ಹುಟ್ಟುಹಬ್ಬದ ದಿನ ಸಾಕಷ್ಟು ಹೊಸ ಚಿತ್ರಗಳ ಪೋಸ್ಟರ್ಗಗಳು ರೀಲೀಸ್ ಆಗಿದ್ದವು, ಆ ಪೋಸ್ಟರ್ ಗಳಲ್ಲಿ ಒಂದು ಯಾವುದೇ ಮಾಹಿತಿ ಇಲ್ಲದ ‘ಬ್ಲ್ಯಾಕ್‌ ಆ್ಯಂಡ್ ವೈಟ್‌’ ಪೋಸ್ಟರ್‌ ಸಹ ರಿಲೀಸ್ ಆಗಿತ್ತು. ಅದು ಯಾವ ಸಿನಿಮಾ? ನಿರ್ದೇಶಕರು ಯಾರು? ಎಂಬ ಮಾಹಿತಿಗಳೇನು ಇರಲಿಲ್ಲ. ಅಫ್ರೋಡೈಟ್ ರಿನೈಸಾನ್ಸ್‌ ಟಾಕೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಇದರ ನಿರ್ಮಾಣದ ಹೊಣೆ ಹೊತ್ತುಕೊಂಡಿದೆ ಅಂತ ಹೇಳಲಾಗಿತ್ತು, ಇದೀಗ ಈ ಸಿನಿಮಾನ ನಿರ್ದೇಶನ ಮಾಡ್ತಿರೋದು ಎ.ಹರ್ಷ ಎಂದು ತಿಳಿದುಬಂದದ್ದು, ಭಜರಂಗಿ 2 ನಂತರ ಹರ್ಷ ಅವರು ಈ ಚಿತ್ರವನ್ನು ಕೈಗೆತ್ತುಕೊಳ್ಳಬಹುದು ಎಂದು ಹೇಳಲಾಗುತ್ತಿದೆ

ಶಿವಣ್ಣ ಮತ್ತು ಹರ್ಷ ಅವರ ಕಾಂಬಿನೇಷನ್ ಅಂದರೆ ಅಭಿಮಾನಿಗಳಿಗೆ ಏನೋ ಒಂದು ರೀತಿಯ ನಿರೀಕ್ಷೆ ಹೆಚ್ಚಿರುತ್ತದೆ. ಈಗಾಗಲೇ ಭಜರಂಗಿ2 ನ ಒಂದು ಟೀಚರ್ ಶಿವಣ್ಣನ ಅಭಿಮಾನಿಗಳಿಗೆ ರಸದೌತಣ ನೀಡಿದ್ದು. ಭಜರಂಗಿ 2 ಚಿತ್ರದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಹಿಟ್ ಕಾಂಬಿನೇಷನ್ ಜೋಡಿ ಆಗಿರುವ ಶಿವಣ್ಣ ಮತ್ತು ಹರ್ಷ ಅವರ ಭಜರಂಗಿ 2 ಬಾಕ್ಸ್ ಆಫೀಸ್ ಹಿಟ್ ಆಗುವದರಲ್ಲಿ ಯಾವುದೆ ಅನುಮಾನ ಇಲ್ಲ.

Leave a Reply

Your email address will not be published. Required fields are marked *