ಡ್ರಗ್ಸ್ ಜಾಲ :ಎಲ್ಲಾ ಕಡೆಯೂ ಒಳ್ಳೆಯದು ಮತ್ತು ಕೆಟ್ಟದ್ದೂ ಎರಡು ಇರುತ್ತದೆ, ಶಿವಣ್ಣ ಕಂಡಂತೆ ಚಿತ್ರರಂಗ

ಸ್ಯಾಂಡಲ್ ವುಡ್ ನಲ್ಲಿ ಬಾರಿ ಚರ್ಚೆಯ ವಿಷಯವಾಗಿರುವ ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ದಿನಕ್ಕೊಂದು ತಿರುವು ಪಡೆಯುತ್ತಿದ್ದು ಇಡೀ ದೇಶವೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿ ನೋಡುವಂತಾಗಿದೆ.

ಈ ಸ್ಯಾಂಡಲ್ ವುಡ್ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿರುವ ಶಿವಣ್ಣ ಅವರು ‘ಕನ್ನಡ ಚಿತ್ರರಂಗದಲ್ಲಿ ಡ್ರಗ್ ಮಾಫಿಯಾ ಇರುವುದನ್ನು ನಾನು ಕಂಡಿಲ್ಲ. ಇಲ್ಲಿರುವ ತಂತ್ರಜ್ಞರು, ಕಲಾವಿದರು ಎಲ್ಲರೂ ಒಳ್ಳೆಯವರೇ ಎಂದು ಭಾವಿಸಿರುವೆ. ಅಲ್ಲದೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಯಾರೂ ಸಹ ಮಾತನಾಡುವುದು ಸರಿಯಲ್ಲ. ಕಾನೂನಾತ್ಮಕ ಸಂಸ್ಥೆಗಳು ನಡೆಸುತ್ತಿರುವ ತನಿಖೆಯಿಂದ ಸತ್ಯಾಂಶ ಹೊರಬರಲಿ’ ಎಂದಿದ್ದಾರೆ.

‘ನಾನು ಚಿತ್ರರಂಗಕ್ಕೆ ಬಂದಾಗಿನಿಂದಲೂ ಇಂತಹದನ್ನು ಕಂಡಿಲ್ಲ. ನಾನು ನನ್ನ ಈ ಸಿನಿ ಜರ್ನಿಯ ಆರಂಭದ ದಿನಗಳಿಂದಲೂ ಇಲ್ಲಿಯವರೆಗೆ ನೋಡಿರುವಂತೆ ಯಾವುದೇ ನಟ ನಟಿಯರು, ಸಹಕಲಾವಿದರು, ತಂತ್ರಜ್ಞರು ಹಾಗೂ ಪ್ರೊಡಕ್ಷನ್ ಯೂನಿಟ್‌ನ ಹುಡುಗರಲ್ಲಿ ಅಂತಹ ವರ್ತನೆಯವರನ್ನು ನಾನು ನೋಡಿಲ್ಲ. ನಮ್ಮ ಚಿತ್ರರಂಗ ಒಂದು ಕುಟುಂಬದಂತೆ ಇದ್ದು ಕಲಾವಿದರ ಕಡೆಗೆ ಬೊಟ್ಟು ಮಾಡಿ ಕಳಂಕ ಹೊರಿಸುವುದು ಬೇಡ. ಸಮಾಜಕ್ಕೂ ಕೆಟ್ಟ ಸಂದೇಶ ಹೋಗಬಾರದು’ ಎಂದಿದ್ದಾರೆ ಶಿವಣ್ಣ .

ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ ಕೊಟ್ಟ ಆದಾಯ ತೆರಿಗೆ ಇಲಾಖೆ ..!

ಅಲ್ಲದೆ ‘ಎಲ್ಲಾ ಕಡೆಯೂ ಒಳ್ಳೆಯದು , ಕೆಟ್ಟದ್ದೂ ಎರಡು ಇರುತ್ತದೆ. ನಾವು ಅದರಲ್ಲಿ ಯಾವುದನ್ನು ತೆಗೆದುಕೊಳ್ಳಬೇಕು, ಯಾವುದನ್ನು ತೆಗೆದುಕೊಳ್ಳಬಾರದೆಂಬುದು ಎಲ್ಲರಿಗೂ ತಿಳಿದಿರಬೇಕು, ಅವರವರ ಜೀವನ ಅವರವರಿಗೆ ಬಿಟ್ಟಿದ್ದು’ ಎಂದು ಈ ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ದ ಬಗ್ಗೆ ಹೇಳಿಕೊಂಡಿದ್ದಾರೆ.

ಎ.ಕೆ. 47 ‘ ಚಿತ್ರದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಬರೆದಿರುವ ‘ಹೇ ರಾಮ್ ‘ ಹಾಡಿನಲ್ಲಿರುವ ‘ದಿಸ್ ಈಸ್ ಇಂಡಿಯಾ’ ಸಾಲು ಸದ್ಯದ ಸನ್ನಿವೇಶಕ್ಕೆ ತುಂಬಾ ಹೊಂದಿಕೆಯಾಗುತ್ತದೆ’ ಎನ್ನುವುದು ಶಿವಣ್ಣ ಅವರ ಅನಿಸಿಕೆ ಕೂಡ ಆಗಿದೆ.

ಇಡೀ ಗಂಧದ ಗುಡಿಗೆ ಅಂಟಿರುವ ಈ ಡ್ರಗ್ಸ್ ಜಾಲದ ಬೇರುಗಳನ್ನು ಕಿತ್ತು ಸ್ವಚ್ಛ ಮಾಡುವ ಸಮಯ ಈಗ ಬಂದಿದ್ದು. ಇದರಿಂದ ಬೇಗ ಸ್ಯಾಂಡಲ್ ವುಡ್ ಹೊರ ಬರಲಿ ಆಗು ಕೆಟ್ಟವರಿಗೆ ಬೇಗ ಶಿಕ್ಷೆ ಆಗಲಿ ಎಂದು ದೇವರಲ್ಲಿ ಕೇಳಿ ಕೊಳ್ಳೋಣ.

Leave a Reply

Your email address will not be published. Required fields are marked *