ಡಾ.ರಾಜ್ ಕುಮಾರ್ ಅವರ ಸ್ಮರಣಾರ್ಥ ಬಿಡುಗಡೆ ಆಗುತ್ತಿದೆ ಚಿನ್ನ ಮತ್ತು ಬೆಳ್ಳಿಯ ನಾಣ್ಯ.

ಡಾ.ರಾಜ್ ಕುಮಾರ್ ನಾಣ್ಯ

ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್ ‌ಕುಮಾರ್‌ ಅವರ ಸ್ಮರಣಾರ್ಥ ಚಿನ್ನ ಮತ್ತು ಬೆಳ್ಳಿ ನಾಣ್ಯ ಗಳನ್ನು ಬಿಡುಗಡೆ ಮಾಡಲು ಕಲೆಕ್ಸಿಬಲ್ ಮಿಂಟ್ ಸಂಸ್ಥೆಯು ಮುಂದಾಗಿದ್ದು ಈ ನಾಣ್ಯಗಳನ್ನು ಇದೇ ನವಂಬರ್ 1 ರ ಕನ್ನಡ ರಾಜ್ಯೋತ್ಸವರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಈ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳ ಒಂದು ಭಾಗದಲ್ಲಿ ಅಣ್ಣಾವ್ರ ಚಿತ್ರ ವಿದ್ದರೆ ಮತ್ತೊಂದು ಭಾಗದಲ್ಲಿ ಗಂಡಭೇರುಂಡದ ಚಿತ್ರವಿರುತ್ತದೆ. ಡಾ.ರಾಜ್‌ಕುಮಾರ್‌ ಅವರ ಪ್ರೀತಿಪಾತ್ರರಿಗೆ ಗೌರವ ಸಲ್ಲಿಸಲು ಈ ನಾಣ್ಯವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು. ಈ ನಾಣ್ಯಗಳನ್ನು ಖರೀದಿಸಲು ಈಗ ಪ್ರೀ ಆರ್ಡರ್ ಬುಕಿಂಗ್ ಸೌಲಭ್ಯ ಲಭ್ಯವಿದ್ದು ಬುಕಿಂಗ್ ಮಾಡಿದ ನಾಣ್ಯಗಳನ್ನು ಇದೇ ನವೆಂಬರ್‌ನಲ್ಲಿ ವಿತರಿಸಲಾಗುವುದು.

ಅಣ್ಣಾವ್ರ ಅಭಿಮಾನಿಗಳಿಗೆ ಉತ್ತಮ ಗುಣಮಟ್ಟದ ಮತ್ತು ಉತ್ತಮ ಮೌಲ್ಯವನ್ನು ತಲುಪಿಸುವ ಗುರಿಯನ್ನು ಹೊಂದಿರುವುದರಿಂದ ಎಲ್ಲಾ ಚಿನ್ನದ ನಾಣ್ಯಗಳನ್ನು ಶೇಕಡ 999.9 ಗುಣಮಟ್ಟದ ಚಿನ್ನವನ್ನು ಬಳಸಿ ಈ ನಾಣ್ಯಗಳನ್ನು ತಯಾರಿಸಲಾಗುತ್ತದೆ. ಬೆಳ್ಳಿ ನಾಣ್ಯಗಳನ್ನು ಸೊಗಸಾದ 999 ಫೈನ್ ಸಿಲ್ವರ್‌ನಿಂದ ತಯಾರಿಸಲಾಗುತ್ತದೆ.

ಇದೇ ನವಂಬರ್ ನಲ್ಲಿ ನಮ್ಮ ಅಣ್ಣಾವ್ರ ಚಿನ್ನದ ನಾಣ್ಯಗಳು ಬಿಡುಗಡೆಯಾಗಲಿದ್ದು ಈಗ ಬುಕಿಂಗ್ ಪ್ರಾರಂಭವಾಗಿರುವುದರಿಂದ ಅಭಿಮಾನಿಗಳು ಆಗಲೆ ತಮ್ಮ ನೆಚ್ಚಿನ ಮೇರು ನಟ ಡಾ. ರಾಜ್ ಕುಮಾರ್ ಅವರ ನಾಣ್ಯವನ್ನು ಬುಕ್ ಮಾಡಲು ಪ್ರಾರಂಭಿಸಿದ್ದಾರೆ.

Leave a Reply

Your email address will not be published. Required fields are marked *