ಜೋಗಿ ಚಿತ್ರದ 15 ವರ್ಷಗಳ ಸಂಭ್ರಮಾಚರಣಗೆ ಶಿವಣ್ಣ ಅಭಿಮಾನಿಗಳ ಸಿಡಿಪಿ ಗಿಫ್ಟ್.

ಈ ವರ್ಷದ ಆರಂಭದಲ್ಲಿ ಶಿವರಾಜ್‌ಕುಮಾರ್ ಅವರ ಓಂ ಚಿತ್ರದ 25 ವರ್ಷಗಳ ವರ್ಷಾಚರಣೆ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಶಿವರಾಜ್ ಕುಮಾರ್ ಅವರ ಮತ್ತೊಂದು ಚಿತ್ರ ಜೋಗಿ 15 ವರ್ಷಗಳ ವರ್ಷಾಚರಣೆಯನ್ನು ಆಚರಿಸಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಜೋಗಿ ಸ್ಯಾಂಡಲ್ ವುಡ್ ನಲ್ಲಿ ಭಾರಿ ಸಂಚಲನ ಸೃಷ್ಟಿಸಿದ ಚಿತ್ರ. ಈ ಚಿತ್ರವು ತಾಯಿ-ಮಗನ ಭಾವನಾತ್ಮಕ ಬಾಂಧವ್ಯ ಮತ್ತು ಒಬ್ಬ ಮುಗ್ಧ ಹಳ್ಳಿ ಹುಡುಗ ತನಗರಿವಿಲ್ಲದೆ ಭೂಗತ ಲೋಕಕ್ಕೆ ಎಂಟ್ರಿ ಕೊಡುವ ಕಥಾಹಂದರವನ್ನು ಹೊಂದಿದ್ದ ಚಿತ್ರ.

ಜೋಗಿ ಚಿತ್ರವನ್ನು 19 ಅಗಸ್ಟ್ 2005 ರಲ್ಲಿ 172 ಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ರಿಲೀಸ್ ಮಾಡಲಾಗಿತ್ತು.
ಸುಮಾರು 60 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 100 ಕ್ಕೂ ಹೆಚ್ಚು ದಿನಗಳ ಕಾಲ ಪ್ರದರ್ಶನಗೊಂಡು ಸ್ಯಾಂಡಲ್‌ವುಡ್‌ನಲ್ಲಿ ದಾಖಲೆ ಸೃಷ್ಟಿಸಿದೆ. ಆಗೆ ಈ ಚಿತ್ರದ ಹಾಡುಗಳು ಈಗಲೂ ಎವರ್ ಗ್ರೀನ್ ಹಿಟ್ ಸಾಲಲ್ಲಿವೆ.

ಶಿವಣ್ಣನ ಮುಗ್ಧ ಹಳ್ಳಿ ಹುಡುಗನ ಪಾತ್ರ ಹಾಗು ಅರುಂಧತಿನಾಗ್ ಅವರ ಮಗನನ್ನು ಕಳೆದುಕೊಂಡು ಹುಡಕುವ ಒಬ್ಬ ತಾಯಿಯ ಪಾತ್ರ. ಚಿತ್ರ ನೋಡುವ ಪ್ರೇಕ್ಷಕರ ಕಣ್ಣಂಚಲ್ಲಿ ನೀರು ತರಿಸಿದ್ದು ಸುಳ್ಳಲ್ಲ.

ಆಗೆ ಈ ಚಿತ್ರ ನೋಡಿದ ಅನೇಕ ಪ್ರೇಕ್ಷಕರು ನಿರ್ದೇಶಕ ಪ್ರೇಮ್ ಅವರ ಮೇಲೆ ಕೋಪ ತೋರಿಸಿದ್ದು ಇದೆ. ಚಿತ್ರದ ಕ್ಲೈಮೆಕ್ಸ್ ನಲ್ಲಿ ತಾಯಿ ಮತ್ತು ಮಗನನ್ನು ಒಂದು ಮಾಡದಿದ್ದಕ್ಕೆ ಪ್ರೇಮ್ ಅವರು ಪ್ರೇಕ್ಷಕರ ಕೋಪಕ್ಕೆ ತುತ್ತಾಗಿದ್ದರು.

ಈ ಚಿತವನ್ನು ತೆಲುಗು ಮತ್ತು ತಮಿಳಿಗೂ ರೀಮೇಕ್ ಮಾಡಲಾಗಿತ್ತು. ತೆಲುಗಿನಲ್ಲಿ ಪ್ರಭಾಸ್ ಮತ್ತು ನಯನತಾರ ಅಭಿನಯಿಸಿದ್ದರೆ ತಮಿಳಿನಲ್ಲಿ ಧನುಷ್ ಮತ್ತು ಮೀರಾ ಜಾಸ್ಮೀನ್ ಅಭಿನಯಿಸಿದ್ದರು. ತಮಿಳು ಮತ್ತು ತೆಲುಗಿನಲ್ಲೂ ಚಿತ್ರ ಅದ್ಭುತ ಪ್ರದರ್ಶನ ಕಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ರಾಜ್ಯದಲ್ಲಿ ಎರಡು ಲಕ್ಷ ಗಡಿ ದಾಟಿದ ಕೊರೊನ ಸೊಂಕಿತರ ಸಂಖ್ಯೆ | ಇಂದು ಕೂಡ 18 ಜಿಲ್ಲೆಗಳಲ್ಲಿ ನೂರಕ್ಕೂ ಅಧಿಕ ಕೇಸ್.

ಈ ಚಿತ್ರದಿಂದ ಶಿವರಾಜ್ ಕುಮಾರ್ ಅವರು ಕರ್ನಾಟಕ ಸರ್ಕಾರ ನೀಡುವ 2005-2006 ರ ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದರೆ, ಅರುಂಧತಿ ನಾಗ್ ಅವರು ಉತ್ತಮ ಪೋಷಕ ನಟಿ ಪ್ರಶಸ್ತಿ, ಆಗೆ ನಿರ್ದೇಶಕ ಪ್ರೇಮ್ ಅವರಿಗೆ ಬೆಸ್ಟ್ ಸ್ಕ್ರೀನ್ ಪ್ಲೇ ಅವಾರ್ಡ್ ಕೊಟ್ಟು ಗೌರವಿಸಲಾಗಿತ್ತು. ಇದಲ್ಲದೆ ಇಟಿವಿ ಫಿಲ್ಮ್ ಅವಾರ್ಡ್ ನಲ್ಲೂ ಬರೊಬ್ಬರಿ 11 ಪ್ರಶಸ್ತಿಗಳನ್ನು ಬಾಚಿಗೊಂಡಿತ್ತು.

ಜೋಗಿ ಸಿಡಿಪಿ

ಇದೀಗ ಮತ್ತೆ ಶಿವಣ್ಣ ಮತ್ತು ಪ್ರೇಮ್ ರ ಜೋಗಿ ಚಿತ್ರ ಸೋಷಿಯಲ್ ಮಿಡಿಯಾಗಳಲ್ಲಿ ಬಾರಿ ಸದ್ದು ಮಾಡುತ್ತಿದೆ.

ಕಾರಣ ಜೋಗಿ ಚಿತ್ರ ಇದೆ ಆಗಸ್ಟ್ 19 ಕ್ಕೆ ರಿಲೀಸ್ ಆಗಿ 15 ವರ್ಷಗಳನ್ನು ಪೂರೈಸುತ್ತಿದೆ. ಈ ಸಂಭ್ರಮಾಚರಣೆಗೆ ಆಗಲೆ ಅಭಿಮಾನಿಗಳು ತಯಾರಿ ಮಾಡಿಕೊಂಡಿದ್ದು. ಆಗಸ್ಟ್ 18 ಕ್ಕೆ ಚಿತ್ರದ ಸಿಡಿಪಿ ಬಿಡುಗಡೆ ಮಾಡುವ ಮೂಲಕ ತಮ್ಮ ನೆಚ್ಚಿನ ನಟ ಶಿವಣ್ಣ ಅಭಿನಯದ ಜೋಗಿ ಚಿತ್ರದ 15 ವರ್ಷಗಳ ಸಂಭ್ರಮಾಚರಣೆಯನ್ನು ಮಾಡಲಿದ್ದಾರೆ.

Leave a Reply

Your email address will not be published. Required fields are marked *