ಮಹಾ ಭಾರತದಲ್ಲಿ ಪಾಂಡವರು ಜೂಜಿನಲ್ಲಿ ದ್ರೌಪದಿಯನ್ನು ಪಣಕಿಟ್ಟಿದ್ದ ಕಥೆಯನ್ನು ಎಲ್ಲರೂ ಓದಿರುತ್ತೀರ ಅದೇ ರೀತಿ ಇಲ್ಲೊಬ್ಬ ಪತಿರಾಯ ತನ್ನ ಪತ್ನಿಯನ್ನು ಪಣಕಿಟ್ಟು ಸೋತು, ಗೆದ್ದವರ ಜೊತೆಗೆ ತನ್ನ ಪತ್ನಿಯನ್ನು ಕಳುಹಿಸಿರುವ ಘಟನೆ ಬಿಹಾರದ ಭಾಗಲ್ಪುರ ಹಸಂಗಂಜ್ ಪ್ರದೇಶದಲ್ಲಿ ನಡೆದಿದೆ.
ವಿಪರೀತ ಇಸ್ಪೀಟ್ ದಾಸನಾಗಿದ್ದ ಪತಿರಾಯ ಜೂಜಾಡಲು ಹಣವಿಲ್ಲವೆಂದು ಪತ್ನಿಯನ್ನು ಪಣಕಿಟ್ಟು ಸೋತಿದ್ದಾನೆ. ಮಾತಿನಂತೆ ಪತ್ನಿಯನ್ನು ಗೆದ್ದವರ ಜೊತೆ ಕಳುಹಿಸಲು ಮುಂದಾದಾಗ ಹೆಂಡತಿ ವಿರೋದಿಸಿದ್ದಾಳೆ. ಅದರೆ ಅವಳ ಮಾತಿಗೆ ಕಿಂಚಿತ್ತೂ ಬೆಲೆ ಕೊಡದೆ ಬಲವಂತವಾಗಿ ಅವಳನ್ನು ಅವರೊಂದಿಗೆ ಕಳುಹಿಸಿ ಕೊಟ್ಟಿದ್ದಾನೆ.
ಪತ್ನಿಯನ್ನು ಕರೆದುಕೊಂಡು ಹೋದ ಆ ಪಾಪಿಗಳು ಅಮಾನುಷವಾಗಿ ಗ್ಯಾಂಗ್ ರೇಪ್ ಮಾಡಿದ್ದಾರೆ. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದ ಪತ್ನಿಯನ್ನು ಕಂಡು ಕೆಂಡಮಂಡಲವಾದ ಪತಿರಾಯ ಆಕೆಯ ಗುಪ್ತಾಂಗಕ್ಕೆ ಆಸಿಡ್ ಹಾಕಿದ್ದಾನೆ, ಅಲ್ಲದೆ ಆಕೆಗೆ ಆಸಿಡ್ ಕುಡಿಯಲು ಒತ್ತಾಯ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಕಳೆದ ತಿಂಗಳು ಈ ಘಟನೆ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ, ಗಂಡನ ಹಿಂಸೆ ತಡೆಯಲಾರದೆ ಫೋಲಿಸ್ ಠಾಣೆ ಮೆಟ್ಟಲೇರಿರುವ ಆಕೆ ಗಂಡ ಮತ್ತು ಅವನ ಸ್ನೇಹಿತರ ವಿರುದ್ಧ ದೂರು ಕೊಟ್ಟಿದ್ದಾಳೆ. ಸದ್ಯ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.