ಚಿತ್ರಮಂದಿರ ರೀ ಓಪನ್: ಈ ವಾರ ಬಿಡುಗಡೆ ಆಗುತ್ತಿವೆ ಆರು ಚಲನಚಿತ್ರಗಳು

ಚಿತ್ರಮಂದಿರ ರೀ ಓಪನ್

ಬೆಂಗಳೂರು : ಕಳೆದ ಆರು ತಿಂಗಳಿನಿಂದ ಬಾಗಿಲು ಮುಚ್ಚಿದ್ದ ಚಿತ್ರ ಮಂದಿರ ಗಳನ್ನು ಇದೆ ಅಕ್ಟೋಬರ್ 16 ರಿಂದ ರಾಜ್ಯಾದ್ಯಂತ ರೀ ಓಪನ್ ಮಾಡಲು ನಿರ್ಧರಿಸಿರುವುದು ಸಿನಿ ಪ್ರಿಯರಿಗೆ ಖುಷಿ ಕೊಡುವ ವಿಚಾರವಾಗಿದೆ.

ಅದರೆ ಹೊಸ ಚಿತ್ರಗಳನ್ನು ಬಿಡುಗಡೆ ಮಾಡಲು ಕೊಂಚ ತಡವಾಗಲಿರುವುದರಿಂದ ಹಳೆಯ ಚಿತ್ರಗಳನ್ನು ಮರುಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ರಾಜ್ಯದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದರಿಂದ ಚಿತ್ರ ನಿರ್ಮಾಪಕರು ಮತ್ತು ಪ್ರದರ್ಶಕರು ಹೊಸ ಸಿನೆಮಾಗಳ ಬಿಡುಗಡೆಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಲಾಕ್‌ಡೌನ್‌ಗೆ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದ ಚಿತ್ರಗಳನ್ನು ಈಗ ಮರು ಬಿಡುಗಡೆ ಮಾಡಿ, ಆ ಚಿತ್ರಗಳಿಗೆ ಸಿನಿ ಪ್ರಿಯರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ಕಾದು ನೋಡಿ ನಂತರ ಹೊಸ ಚಿತ್ರಗಳನ್ನು ಬಿಡುಗಡೆ ಮಾಡುವದರ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.

ಸದ್ಯ ರಾಜ್ಯದಲ್ಲಿ 600 ಕ್ಕೂ ಹೆಚ್ಚು ಸಿಂಗಲ್ ಸ್ಕಿನ್ ಮತ್ತು 60 ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿದ್ದು ಎಲ್ಲಾ ಚಿತ್ರ ಮಂದಿರಗಳು ಅಕ್ಟೋಬರ್ 16 ರಂದೆ ಮರಳಿ ತರೆಯುವುದು ಅನುಮಾನ ಏಕೆಂದರೆ ಸದ್ಯ ಹೊಸ ಸಿನಿಮಾಗಳು ಬಿಡುಗಡೆ ಆಗದೆ ಇರುವುದು ಹಾಗು ಸಿನೆಮಾಗಳ ಕೊರತೆ ಇರುವುದರಿಂದ ರಾಜ್ಯದಲ್ಲಿ ಕೆಲವೇ ಕೆಲವು ಸಿಂಗಲ್ ಸ್ಕಿನ್ ಚಿತ್ರಮಂದಿರಗಳು ಮಾತ್ರ ತೆರೆಯ ಬಹುದು.

ಈ ಚಿತ್ರಮಂದಿರಗಳಲ್ಲಿ ರೀ ರಿಲೀಸ್ ಆಗಲಿರುವ ಸಿನೆಮಾಗಳು ಪ್ರದರ್ಶನ ಕಾಣಲಿದ್ದು, ಈ ವಾರ ಆರು ಸಿನೆಮಾಗಳು ಮರು ಬಿಡುಗಡೆಯಾಗಲಿವೆ. ಆ ಸಿನೆಮಾಗಳು ಯಾವುವು ಅಂದರೆ ಶಿವಾಜಿ ಸುರತ್ಕಲ್, ಶಿವಾರ್ಜುನ, ಲವ್ ಮಾಕ್ಟೇಲ್, ಥರ್ಡ್ ಕ್ಲಾಸ್, 5 ಅಡಿ 7 ಅಂಗುಲ ಮತ್ತು ಕಾಣದಂತೆ ಮಾಯವಾದನು.

Leave a Reply

Your email address will not be published. Required fields are marked *