ಇತ್ತೀಚೆಗೆ ಕನ್ನಡ ಚಿತ್ರಗಳು ಬೇರೆ ಭಾಷೆಗಳಗೆ ಡಬ್ಬ ಆಗುವುದು ಸಾಮಾನ್ಯವಾಗಿದೆ. ಆಗೆ ಕೆಲವೊಂದು ಹಿಟ್ ಚಿತ್ರಗಳನ್ನು ಬೇರೆ ಭಾಷೆಗಳಿಗೆ ರೀಮೇಕ್ ಮಾಡುವುದು ಕೂಡ ಸಹಜ, ಈಗ ಕನ್ನಡದ ಚಿತ್ರವೊಂದನ್ನು ಮೂರು ಭಾಷೆಗಳಲ್ಲಿ ರಿಮೇಕ್ ಮಾಡಲು ತಯಾರಿ ನಡೆದಿದೆ.
ಅದು ಯಾವುದೆ ಸ್ಟಾರ್ ನಟರ ಚಿತ್ರವಲ್ಲ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ. ಆರ್. ಪೇಟೆ ಅವರು ನಟಿಸಿದ್ದ ” ನಾನು ಮತ್ತು ಗುಂಡ ” ಚಿತ್ರ. ಶಿವರಾಜ್ ಕೆ.ಆರ್. ಪೇಟೆ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು ನಾಯಕಿಯಾಗಿ ಸಂಯುಕ್ತಾ ಹೊರನಾಡು ನಾಯಕಿಯಾಗಿ ಅಭಿನಯಿಸಿದ್ದರು, ಶ್ರೀನಿವಾಸ್ ತಮ್ಮಯ್ಯ ನಿರ್ದೇಶನ ಮಾಡಿದ್ದ ಈ ಸಿನಿಮಾವನ್ನು ರಘು ಹಾಸನ್ ನಿರ್ಮಾಣ ಮಾಡಿದ್ದರು.

ನಾಯಿ ಮತ್ತು ಮನುಷ್ಯರ ನಡುವಿನ ಸಂಬಂಧವನ್ನು ಈ ಸಿನಿಮಾದಲ್ಲಿ ಅದ್ಭುತವಾಗಿ ತೋರಿಸಲಾಗಿತ್ತು, ನಾನು ಮತ್ತು ಗುಂಡ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಒಳ್ಳೆ ಗಳಿಕೆ ಮಾಡುವುದರ ಜತೆಗೆ ವಿಕ್ಷಕರಿಂದ ಮೆಚ್ಚುಗೆಗೂ ಪಾತ್ರವಾಗಿತ್ತು. ಅದಲ್ಲದೆ “ನಾನು ಮತ್ತು ಗುಂಡ” ಟಿವಿಯಲ್ಲಿ ಪ್ರಸಾರವಾದಾಗ ಅತಿ ಹೆಚ್ಚು ರೇಟಿಂಗ್ ಪಡೆದುಕೊಂಡು ಸ್ಟಾರ್ ನಟರ ಚಿತ್ರಗಳಿಗೂ ಸಡ್ಡು ಹೊಡೆದಿದ್ದು ನಿಮಗೆಲ್ಲ ಗೊತ್ತೇ ಇದೆ.
ಇದೀಗ ಈ ಚಿತ್ರವನ್ನು ರಾಧಿಕಾ ಕುಮಾರಸ್ವಾಮಿ ಅವರ ‘ದಮಯಂತಿ’ ಚಿತ್ರ ಮಾಡಿದ್ದ ನವರಸನ್ ಅವರು ರಿಮೇಕ್ ರೈಟ್ಸ್ ತೆಗೆದುಕೊಂಡದ್ದೂ ಇದನ್ನು ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ರಿಮೇಕ್ ಮಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ನವರಸನ್ ‘ಈ ಸಿನಿಮಾದ ಲೈನ್ ನನಗೆ ಬಹಳ ಇಷ್ಟವಾಯಿತು. ಹಾಗಾಗಿ ನಿರ್ಮಾಣ ನನ್ನ ಬ್ಯಾನರ್ನಲ್ಲಿಯೇ ಆಗುತ್ತದೆ. ಇನ್ನು ಕಥೆಯ ಒನ್ಲೈನ್ ಮಾತ್ರ ಇಟ್ಟುಕೊಂಡಿದ್ದೇವೆ. ಶೇ. 50ರಷ್ಟನ್ನು ಆಯಾ ನೇಟಿವಿಟಿಗೆ ತಕ್ಕಂತೆ ಬದಲಾಯಿಸಿದ್ದೇವೆ. ಈ ಚಿತ್ರ ಖಂಡಿತ ಆ ಭಾಷೆಗಳಲ್ಲಿಯೂ ಸೂಪರ್ ಹಿಟ್ ಆಗಲಿದೆ, ನಿರ್ದೇಶನ ಮತ್ತು ಇನ್ನಿತರ ತಾರಂಗಣದ ಬಗ್ಗೆ ಇನ್ನೂ ಡಿಸೈಡ್ ಆಗಬೇಕು’ ಎಂದು ಹೇಳಿದ್ದಾರೆ.

ಇನ್ನು ತಾವು ನಾಯಕರಾಗಿ ಅಭಿನಯಿಸಿದ ಚಿತ್ರ ಈಗ ಬೇರೆ ಭಾಷೆಗಳಿಗೆ ರೀಮೇಕ್ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಶಿವರಾಜ್ ಕೆ.ಆರ್.ಪೇಟೆ ‘ನಮ್ಮ ಚಿತ್ರ ಬೇರೆ ಭಾಷೆಗಳಿಗೆ ರಿಮೇಕ್ ಆಗುತ್ತಿರುವ ವಿಷಯ ಕೇಳಿ ಖುಷಿಯಾಯಿತು. ಈ ಸಬ್ಜೆಕ್ಟ್ ಎಲ್ಲ ಭಾಷೆಗಳಿಗೂ ಹೊಂದಿಕೆಯಾಗುತ್ತದೆ’ ಎಂದಿದ್ದಾರೆ. ಕನ್ನಡದ ಚಿತ್ರವೊಂದು ಮೂರು ಭಾಷೆಗಳಲ್ಲಿ ರಿಮೇಕ್ ಆಗುವುದೆಂದರೆ ಆ ಚಿತ್ರದ ಕಥೆ ಅಷ್ಟೇ ಪ್ರಾಮುಖ್ಯತೆ ಪಡೆದಿರುತ್ತದೆ.